-->

ಮಗನನ್ನು ಚೈನ್ನಿಂದ ಕಟ್ಟಿ ಕೆಲಸಕ್ಕೆ ಹೋದ ಅಪ್ಪ-ಅಮ್ಮ.. ಕಾರಣವೇನು ಗೊತ್ತಾ?

ಮಗನನ್ನು ಚೈನ್ನಿಂದ ಕಟ್ಟಿ ಕೆಲಸಕ್ಕೆ ಹೋದ ಅಪ್ಪ-ಅಮ್ಮ.. ಕಾರಣವೇನು ಗೊತ್ತಾ?

 

ಲಖನೌ: ಮಕ್ಕಳ ಕಳ್ಳರಿಗೆ ಹೆದರಿ ತಮ್ಮ ಮಗನ ಕಾಲುಗಳನ್ನು ಚೈನ್​ನಿಂದ ಕಟ್ಟಿ ಕೆಲಸಕ್ಕೆ ಹೋಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢ್​ನಲ್ಲಿ ನಡೆದಿದೆ. 

ನಾವಿಬ್ಬರೂ ಕೆಲಸ ಮಾಡುವಾಗ ಅವನು ಸುರಕ್ಷಿತವಾಗಿರಲಿ ಎನ್ನುವುದು ನಮ್ಮ ಉದ್ದೇಶವಾಗಿತ್ತು ಆದ್ದರಿಂದ ಮಕ್ಕಳ ಕಳ್ಳರಿಂದ ಮಗನನ್ನು ರಕ್ಷಿಸಲು ಈ ರೀತಿ ಮಾಡಿದ್ದಾಗಿ ಅವರು ಹೇಳಿದ್ದಾರೆ. 

ನಮ್ಮ ಮನೆಯ ಹತ್ತಿರದಲ್ಲೇ ಇರುವ ಶಿವಾನಿ ಹೆಸರಿನ ಬಾಲಕಿಯನ್ನು ಜೂನ್​ 22ರಂದು ಮಕ್ಕಳ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಈ ವಿಚಾರದಲ್ಲಿ ನಾವೆಲ್ಲರೂ ಸೇರಿ ಪೊಲೀಸ್ ದೂರನ್ನೂ ನೀಡಿದ್ದೇವೆ. ಆದರೆ ಇದುವರೆಗೂ ಶಿವಾನಿಯನ್ನು ಪೊಲೀಸರು ಹುಡುಕಿಲ್ಲ. ಇತ್ತೀಚೆಗೆ ಈ ರೀತಿ ಮಕ್ಕಳ ಕಳ್ಳತನವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ಕಾರಣಕ್ಕೆ ನಾವು ನಮ್ಮ ಮಗನಿಗೆ ಚೈನ್​ನಲ್ಲಿ ಬಂಧಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99