-->

ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಿಲ್ಲ ಎಂದು ಪೊಲೀಸರ ವಿರುದ್ಧ ಯುವಕನ ತಾಯಿ ಆರೋಪ..

ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಿಲ್ಲ ಎಂದು ಪೊಲೀಸರ ವಿರುದ್ಧ ಯುವಕನ ತಾಯಿ ಆರೋಪ..

ರಾಯಚೂರು : ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಸಿರವಾರ ಠಾಣೆ ಪೊಲೀಸರು ರಕ್ಷಣೆ ಒದಗಿಸುತ್ತಿಲ್ಲವೆಂದು ಯುವಕನ ತಾಯಿ ಆರೋಪಿಸಿದ್ದಾಳೆ.
ಜಿಲ್ಲೆಯ ಲಿಂಗಸೂಗೂರಿನ ಮೀನಾಕ್ಷಿ ಅವರ ಮಗ ಅಮರೇಶ್ ಹಾಗೂ ಸಿರವಾರ ತಾಲೂಕಿನ ಸುಮಾ ಲಿಂಗಸೂಗೂರು ಸಬ್ ರಿಜಿಸ್ಟರ್ ಆಫೀಸ್ನಲ್ಲಿ ವಿವಾಹವಾಗಿದ್ದರು.ಬಳಿಕ ಇವರು ಮೈಸೂರಿನಲ್ಲಿ ನೆಲೆಸಿದ್ದರು.ಸುಮಾಳ ತಂದೆ ಗೋವಿಂದಪ್ಪ ಹೊಸಮನಿ ಯುವತಿ ಕಾಣೆಯ ಕುರಿತು ಸಿರವಾರ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಅಮರೇಶನನ್ನು ಸಂಪರ್ಕಿಸಿ ರಕ್ಷಣೆ ನೀಡುವುದಾಗಿ ಹೇಳಿ ಕರೆಸಿಕೊಂಡಿದ್ದಾರೆ. ಅವರಿಬ್ಬರು ಪೊಲೀಸ್ ಠಾಣೆಗೆ ಬಂದಾಗ ಸುಮಾಳ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.ಆಗ ಇಬ್ಬರನ್ನ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ. 

ಪೊಲೀಸರು ಪ್ರೇಮಿಗಳಿಗೆ ರಕ್ಷಣೆ ನೀಡದೆ ಸುಮಾ ಮನೆಯವರ ಪರವಾಗಿ  ಮಾತನಾಡುತ್ತಿದ್ದಾರೆ.ತಮಗೂ ಸಹ ಸುಮಾ ಮನೆಯವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ತಮಗೆ ರಕ್ಷಣೆ ನೀಡಬೇಕೆಂದು ಯುವಕನ ತಾಯಿ ಮೀನಾಕ್ಷಿ ಒತ್ತಾಯಿಸಿದ್ದಾರೆ. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99