ಟಾಯ್ಲೆಟ್ ನಲ್ಲಿ ಕುಳಿತಿದ್ದ ವೃದ್ಧನ ಮರ್ಮಾಂಗವನ್ನೇ ಕಚ್ಚಿ ಬೆಚ್ಚಿಬೀಳಿಸಿದ ಹಾವು
Wednesday, July 7, 2021
ಕ್ಯಾನ್ಬೆರಾ: ಬೆಳ್ಳಂಬೆಳಗ್ಗೆ ಟಾಯ್ಲೆಟ್ ನಲ್ಲಿ ಕುಳಿತ್ತಿದ್ದ ವೃದ್ಧನ ಮರ್ಮಾಂಗವನ್ನೇ ಹಾವೊಂದು ಕಚ್ಚಿದ ವಿಚಿತ್ರ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ.
65 ವರ್ಷದ ವೃದ್ಧರೋರ್ವರು ಬೆಳಗ್ಗೆ 6 ಗಂಟೆಗೆ ಸುಮಾರಿಗೆ ನಿದ್ರೆಗಣ್ಣಲ್ಲಿ ಎದ್ದು ಟಾಯ್ಲೆಟ್ಗೆ ಹೋಗಿ ಕುಳಿತಿದ್ದಾರೆ. ಆಗ ಇದ್ದಕ್ಕಿದ್ದಂತೆ ಅವರ ಮರ್ಮಾಂಗಕ್ಕೆ ಏನೋ ಕಚ್ಚಿದಂತಾಗಿದೆ. ಕೆಳಗೆ ನೋಡುತ್ತಿದ್ದಂತೆ 5 ಅಡಿ ಉದ್ದ ಹಾವೊಂದು ಕಂಡುಬಂದಿದೆ. ಹಾವು ಕಂಡ ಅವರು ಹೌಹಾರಿ ಬೊಬ್ಬೆ ಹಾಕಿ ಹೊರಗೆ ಓಡಿಬಂದಿದ್ದಾರೆ.
ಇದು ವೃದ್ಧನ ಪಕ್ಕದ ಮನೆಯ 24 ವರ್ಷದ ಯುವಕ ಸಾಕಿದ್ದ ಹಾವು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಹಾವಿನ ವಿಷ ತೆಗೆದಿದ್ದರಿಂದಾಗಿ ಕಚ್ಚಿಸಿಕೊಂಡ ವೃದ್ಧನಿಗೆ ಪ್ರಾಣಾಪಾಯ ಆಗಿಲ್ಲ. ಆದರೆ ಆ ಹಾವು ಯುವಕನ ಮನೆಯಿಂದ ಆತನ ಪಕ್ಕದ ಮನೆಗೆ ಹೋಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಹಾವು ಡ್ರೈನೇಜ್ ಮೂಲಕ ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.