ಬೆಕ್ಕು ತಂದಿಟ್ಟ ಆಪತ್ತು- 1 ಲಕ್ಷ ಹಣದೊಂದಿಗೆ ಮನೆಯು ಸರ್ವನಾಶ..
Tuesday, July 6, 2021
ತೆಲಂಗಾಣ: ಬೆಕ್ಕು ಮಾಡಿದ ಅನಾಹುತದಿಂದಾಗಿ ರೈತನೊಬ್ಬ ಕಷ್ಟಪಟ್ಟು ದುಡಿದ ಹಣವೆಲ್ಲ ಸುಟ್ಟು ಬೂದಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ರೈತ ವೀರೇಶ್ ತಾವು ಬೆಳೆದ ಭತ್ತವನ್ನು 1 ಲಕ್ಷ ರೂ.ಗೆ ಸರ್ಕಾರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು. ಭತ್ತ ಬೆಳೆಯಲು ಮಾಡಿದ್ದ ಸಾಲವನ್ನು ತೀರಿಸಲು ಅಷ್ಟೂ ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡಿಕೊಂಡು ವಿರೇಶ್ ಮನೆಗೆ ತಂದು ಬಟ್ಟೆಯಲ್ಲಿ ಸುತ್ತಿ ಇಟ್ಟಿದ್ದಾರೆ.
ವೀರೇಶ್ ದೇವರಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿದ್ದರು. ಆದರೆ ಮನೆಯಲ್ಲಿದ್ದ ಬೆಕ್ಕು ಉರಿಯುತ್ತಿದ್ದ ದೀಪವನ್ನು ಬೀಳಿಸಿದೆ. ವಿರೇಶ್ ಅವರ ಮನೆ ಗುಡಿಸಲು ಮನೆಯಾದ್ದರಿಂದ ತಕ್ಷಣ ಇಡೀ ಮನೆಗೂ ಬೆಂಕಿ ಹತ್ತಿಕೊಂಡಿದೆ. ಮನೆಯಲ್ಲಿದ್ದ 1 ಲಕ್ಷ ರೂ. ಕೂಡ ಸುಟ್ಟು ಹೋಗಿದೆ.