ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಕ್ಕದಮನೆಯ ಕಾಮುಕ...
Tuesday, July 6, 2021
ಮೊರೆನಾ(ಮಧ್ಯ ಪ್ರದೇಶ): ಐದು ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ವ್ಯಕ್ತಿವೋರ್ವ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿ ಮನೆ ಸಮೀಪದ ಅಂಗಡಿಗೆ ಬ್ರೆಡ್ ಖರೀದಿಗೆಂದು ತೆರಳಿದ್ದಳು ಸುಮಾರು ಒಂದೂವರೆ ಗಂಟೆಯಾದರೂ ಬಾಲಕಿ ಮನೆಗೆ ಹಿಂದಿರುಗದ್ದರಿಂದ ಮನೆಯವರು ಹುಡುಕಾಟ ನಡೆಸಿದ್ದರು. ಕೊನೆಗೆ ಬಾಲಕಿಯ ಮನೆಯವರು ಆಕೆ ತೆರಳಿದ್ದ ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ ಪಕ್ಕದ ಮನೆಯ ವ್ಯಕ್ತಿ ಚೋಟು ತೋಮರ್ ಎಂಬಾತ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ.
ಸಿಸಿಟಿವಿ ದೃಶ್ಯ ನೋಡಿದ ಸ್ಥಳೀಯರು ಚೋಟು ತೋಮರ್ನ ಮನೆಗೆ ನುಗ್ಗಿ ತಕ್ಷಣ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದಿದ್ದರು. ಅಲ್ಲಿ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಚೋಟು ತೋಮರ್ ಬಾಲಕಿ ಮೇಲೆ ಅತ್ಯಾಚಾರವಸೆಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.