ಅಮೆಜಾನ್ನಿಂದ ವಿಶೇಷ ಆಫರ್ - 90 ಸಾವಿರ ರೂಪಾಯಿ ಬೆಲೆಯ ಎಸಿ ಕೇವಲ 5900 ರೂಪಾಯಿಗೆ ಮಾರಾಟ...!!
Tuesday, July 6, 2021
ನವದೆಹಲಿ: 96 ಸಾವಿರ ರೂಪಾಯಿ ಬೆಲೆಯ ಎಸಿಯನ್ನು ಕೇವಲ 5,900 ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅಮೆಜಾನ್ ಇಂತಹದೊಂದು ವಿಶೇಷ ಆಫರ್ ನೀಡಿತ್ತು. ಬರೋಬ್ಬರಿ ಶೇ. 94 ರಿಯಾಯಿತಿ ನೀಡಲಾಗಿತ್ತು.
ಅಮೇಜಾನ್ ಮಾಮೂಲು ದಿನಗಳಲ್ಲಿ ಅದನ್ನು ರಿಯಾಯಿತಿ ಕೊಟ್ಟು 90 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತದೆ. ಆದರೆ ಇಂದು ವಿಶೇಷ ಎನ್ನುವಂತೆ ಶೇ. 94 ರಿಯಾಯಿತಿ ಕೊಟ್ಟು 5,900 ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಸ್ವಲ್ಪ ಸಮಯದರಲ್ಲಿ ಎಚ್ಚೆತ್ತುಕೊಂಡ ಸಂಸ್ಥೆ ಬೆಲೆಯನ್ನು 59,490 ರೂಪಾಯಿಗೆ ಏರಿಸಿದೆ. ಶೇ. 20 ರಿಯಾಯಿತಿ ದರವನ್ನು ನೀಡಲಾಗಿದೆ. ತಿಂಗಳಿಗೆ 2,800 ಕಟ್ಟುವ ಇಎಂಐ ಆಪ್ಶನ್ ಕೂಡ ಕೊಡಲಾಗಿದೆ. ಅಲ್ಲಿಗೆ ಶೇ.94 ರಿಯಾಯಿತಿ ಕೆಲ ತಾಂತ್ರಿಕ ದೋಷದಿಂದ ಉಂಟಾಗಿದ್ದು ಎನ್ನುವುದು ಸ್ಪಷ್ಟವಾಗಿದೆ.