ಮದ್ಯದಂಗಡಿಯ ಮುಂಭಾಗ ನವ ವಧು-ವರರು ಪರಸ್ಪರ ಹಾರ ಬದಲಿಸಿಕೊಂಡು ವಿವಾಹವಾದರು. ಈ ವಿವಾಹವು ಕೇರಳ ಕ್ಯಾಟರರ್ಸ್ ಅಸೋಸಿಯೇಶನ್‌ನ ಪ್ರತಿಭಟನೆಯ ಭಾಗವಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ವಿವಾಹ ಕಾರ್ಯಗಳಿಗಾಗಿ ಅತಿಥಿಗಳ ಮಿತಿಯನ್ನು 50ಕ್ಕೆ ನಿಗದಿಪಡಿಸಿದೆ. ಈ ನಿರ್ಧಾರವನ್ನು ಆಲ್ ಕೇರಳ ಕ್ಯಾಟರರ್ಸ್ ಅಸೋಸಿಯೇಷನ್ ವಿರೋಧಿಸಿದ್ದು ರಾಜ್ಯಾದ್ಯಂತ ಮದ್ಯದಂಗಡಿಗಳ ಮುಂದೆ ಪ್ರತಿಭಟನೆ ಘೋಷಿಸಿದೆ. ಈ ಪ್ರತಿಭಟನಾ ಕೂಟದಲ್ಲಿ ಪ್ರಮೋದ್ ಮತ್ತು ಧನ್ಯಾ ಎಂಬವರು ಪರಸ್ಪರ ಹಾರ ಬದಾಲಾಯಿಸುವ ಮೂಲಕ ವಿವಾಹವಾದರು. ಈ ಮುಖೇನ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.