ಚುಡಾಯಿಸಿ ಹಿಂಬಾಲಿಸುತ್ತಿದ್ದ ಕಾಮುಕನಿಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು ನೀಡಿದ ಮಹಿಳೆ..!!
Sunday, July 4, 2021
ಬೆಳಗಾವಿ: ಮಹಿಳೆಯನ್ನು ಚುಡಾಯಿಸಿ ಹಿಂಬಾಲಿಸುತ್ತಿದ್ದ ಕಾಮುಕನಿಗೆ ಆಕೆ ನಡುರಸ್ತೆಯಲ್ಲೇ ಆತನಿಗೆ ಚಪ್ಪಲಿಯೇಟು ನೀಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಗೋಪಾಲ್ ಗುರನ್ನವರಗೆ ಎಂಬಾತನಿಗೆ ಮಹಿಳೆ ಚಪ್ಪಲಿಯಿಂದ ಏಟ್ ಕೊಟ್ಟಿದ್ದಾರೆ. ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮುಗಿಸಿ ಮನೆಗೆ ವಾಪಸ್ ಮರಳುವ ವೇಳೆಯಲ್ಲಿ ಕೆಲ ತಿಂಗಳಿಂದ ಗೋಪಾಲ್ ಹಿಂಬಾಲಿಸುತ್ತಾ ಚುಡಾಯಿಸುತ್ತಿದ್ದ, ಜತೆಗೆ ಸಿಳ್ಳೆ ಹೊಡೆಯುತ್ತಾ ತೊಂದರೆ ಕೊಡುತ್ತಿದ್ದ.
ಮಹಿಳೆ ಈ ಹಿಂದೆ ಹಲವು ಸಾರಿ ಎಚ್ಚರಿಕೆ ನೀಡಿದ್ದರೂ ಆತ ಸುಮ್ಮನಾಗಿರಲಿಲ್ಲ. ಆದ್ದರಿಂದ ಮಹಿಳೆ ಪತಿಯ ಜತೆಗೂಡಿ ನಡುರಸ್ತೆಯಲ್ಲೇ ಚಪ್ಪಲಿ ಏಟು ಕೊಟ್ಟಿದ್ದಾರೆ.