
ಅರಣ್ಯದಲ್ಲಿ ಮಗು ಅಳುವ ಶಬ್ದ ಕೇಳ್ತಿದೆ ಎಂದು ಹೋಗಿ ನೋಡಿದಾಗ.. ಅಲ್ಲಿ ಸಿಕ್ಕಿದ್ದು ಇಬ್ಬರ ಹೆಣ..!!
ಅಮ್ರಾಬಾದ್: ಅರಣ್ಯದಲ್ಲಿ ಮಗು ಅಳುವ ಶಬ್ದ ಕೇಳುತ್ತಿದೆ ಎಂದು ಅಲ್ಲಿ ಹೋಗಿ ನೋಡಿದಾಗ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಮದ್ದಿಮಡುಗು ನಲ್ಲಮಲ ಅರಣ್ಯ ಪ್ರದೇಶದಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ತಲಕೊಂಡಪಲ್ಲಿ ಮಂಡಲದ ಗಟ್ಟು ಇಪ್ಪಲಪಲ್ಲಿ ಗ್ರಾಮದ ಶ್ರೀನಿವಾಸನ್ (28) ಅದೇ ಗ್ರಾಮದ ಸಮಂತಾ (27) ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಜಾತಿ ಬೇರೆ ಬೇರೆಯಾಗಿರುವುದರಿಂದ ಹಿರಿಯರು ಇವರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಹಾಗಾಗಿ ಸಂಬಂಧಗಳಿಗೆ ಎಂಟು ವರ್ಷದ ಹಿಂದೆ ಬೇರೆಯವರೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ.
ಕೆಲವು ದಿನಗಳ ಹಿಂದೆ ತವರಿಗೆ ಬಂದ ಸಮಂತಾ ನಾಲ್ಕು ವರ್ಷದ ಮಗನನ್ನು ಕರೆದುಕೊಂಡು ಪ್ರಿಯಕರ ಶ್ರೀನಿವಾಸನ್ ಜತೆ ಪರಾರಿಯಾಗಿದ್ದಾಳೆ. ಸಮಂತಾ ಶನಿವಾರ ಅವರವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ತಕ್ಷಣ ಪಾಲಕರು ಈ ಬಗ್ಗೆ ದೂರು ನೀಡಿದ್ದಾರೆ. ಫೋನ್ನಲ್ಲಿ ಪ್ರೇಮಿಗಳು ಹೇಳಿದ ಸ್ಥಳಕ್ಕೆ ಭೇಟಿ ನೀಡಿದಾಗ ಅರಣ್ಯದಿಂದ ಮಗುವ ಅಳುವ ಶಬ್ದವನ್ನು ಕೇಳಿ ಅಲ್ಲಿಗೆ ಹೋಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಇಬ್ಬರು ಕೀಟನಾಶಕ ಸೇವಿಸಿ ಸಾವಿಗೀಡಾಗಿದ್ದರು. ಇಬ್ಬರ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.