ಇನ್ನು ಮುಂದೆ ಜಿಯೋ ನೀಡುತ್ತಿದೆಯಂತೆ ‘ತುರ್ತು ಡೇಟಾ ಸಾಲ’..! ಮಾಹಿತಿ ಇಲ್ಲಿದೆ
Sunday, July 4, 2021
ನವ ದೆಹಲಿ: ದೇಶದ ಅತ್ಯಂತ ದೊಡ್ಡ ಟೆಲಿಕಾಂ ನೆಟ್ ವರ್ಕ್ ಸಂಸ್ಥೆಯಾದ ರಿಲಯನ್ಸ್ ಜಿಯೋ ಕಂಪೆನಿಯು ಇನ್ನು ಮುಂದೆ ತುರ್ತು ಡೇಟಾ ಸಾಲ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಹೇಳಿಕೊಂಡಿದೆ. ಈ ಮೂಲಕ ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ಈ ‘ತುರ್ತು ಡೇಟಾ ಲೋನ್’ ಅಥವಾ ತುರ್ತು ಡೇಟಾ ಸಾಲ ಯೋಜನೆಯು ಯಾವುದೇ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಜಿಯೋ ಗ್ರಾಹಕರು ಮೈ ಜಿಯೋ ಅಪ್ಲಿಕೇಶನ್ ಮೂಲಕ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಕೇವಲ 11 ರೂಪಾಯಿಗೆ 1 ಜಿಬಿ ಡೇಟಾ ವನ್ನು ಸಾಲದ ರೂಪದಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು. ಹೀಗೆ ಮೈ ಜಿಯೋ ಅಪ್ಲಿಕೇಶನ್ ಮೂಲಕ 11 ರೂ.ನ 1 ಜಿಬಿ ಡೇಟಾವನ್ನು ಒಬ್ಬ ಗ್ರಾಹಕ ಅಂದರೆ, ಒಂದು ನಂಬರ್ ಗೆ ಐದು ಬಾರಿ ಪಡೆದುಕೊಳ್ಳಬಹುದಂತೆ.
ಗರಿಷ್ಠ ವೇಗದ ನಿತ್ಯದ ಡೇಟಾ ಮಿತಿಯು ಮುಗಿದ ತಕ್ಷಣವೇ ರಿಚಾರ್ಜ್ ಮಾಡಿಸಲು ಸಾಧ್ಯವಾಗದೇ ಇರುವವರಿಗೆ ಜಿಯೊದ ಹೊಸ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಟೆಲಿಕಾಂ ತಜ್ಞರು ಅಭಿಪ್ರಾಯ ಪಟ್ಟಿರುವುದಾಗಿ ವರದಿ ತಿಳಿಸಿದೆ.