ನೂರಾರು ಜೋಡಿಗಳ ನಡುವೆ ನಡೆಯಿತು 'ಲೈಂಗಿಕ ಉತ್ಸವ'! ಎಲ್ಲಿ ನಡೆಯಿತು ಈ ಉತ್ಸವ
Wednesday, July 7, 2021
ಇಂಗ್ಲೆಂಡ್: ಇಲ್ಲೊಂದು ಕಡೆ ‘ಲೈಂಗಿಕ ಉತ್ಸವ’ವನ್ನು ಆಚರಿಸುಲಾಗುತ್ತದಂತೆ. ಇಲ್ಲಿ ನೂರಾರು ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ ಅಂದರೆ ನೀವು ನಂಬಲೇಬೇಕು. ನಾಲ್ಕು ಗೋಡೆಗಳ ಮಧ್ಯೆ ಗೌಪ್ಯವಾಗಿ ನಡೆಯುವಂತಹ ಕ್ರಿಯಯನ್ನು ಉತ್ಸವದಂತೆ ಆಚರಿಸೋದೇ ಎಂಬ ಪ್ರಶ್ನೆಗಳು ಉದ್ಭವವಾಗೋದು ಸಹಜ. ಭಾರತೀಯರಿಗೆ ಇದು ಮುಜುಗರದ ಸಂಗತಿ ಸಹಜ. ಆದರೆ ಇಂತಹದ್ದೊಂದು ಉತ್ಸವ ಆಚರಿಸುವಿಕೆ ಇಂಗ್ಲೆಂಡ್‌ನಲ್ಲಿ ಚಾಲ್ತಿಯಲ್ಲಿದೆ.
ಕಳೆದ ಶುಕ್ರವಾರ ಲಿಂಕನ್ಶೈರ್ನ ಗ್ರಂಥಮ್ ಬಳಿ ವಿಶಾಲವಾದ ಜಾಗದಲ್ಲಿ ಲೈಂಗಿಕೋತ್ಸವ ಆರಂಭವಾಗಿದೆ. ಈ ಉತ್ಸವ 4 ದಿನಗಳ ಕಾಲ ನಡೆದಿದೆ. ಸುಮಾರು 200ಕ್ಕೂ ಅಧಿಕ ಮಂದಿ ಇಲ್ಲಿ ಪಾಲ್ಗೊಂಡಿದ್ದರು. ಇಲ್ಲಿಗೆ ನೂರಾರು ಸ್ವಿಂಗರ್ಗಳು ಆಗಮಿಸಿದ್ದು, ವಿಶಾಲವಾದ ಜಾಗದಲ್ಲಿ ನೂರಾರು ಮೊಬೈಲ್ ಕತ್ತಲಕೋಣೆಗಳಲ್ಲಿ ಈ ಲೈಂಗಿಕೋತ್ಸವದಲ್ಲಿ ಸಂಭ್ರಮಿಸಿದ್ದಾರೆ. ಅತಿಥಿಗಳು ಹಾಟ್ ಟಬ್‌ಗಳಲ್ಲಿ ಮತ್ತು ಮಾಂತ್ರಿಕವಸ್ತು ಡೆಮೊಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಗಾಯನ, ಮಿಸ್ ಅಥವಾ ಮಿಸ್ಟರ್ ಸ್ವಿಂಗಾಥಾನ್ ಕಿರೀಟ ಸ್ಪರ್ಧೆಯೂ ನಡೆಯಿತು. ಪ್ರತಿ ಐಷಾರಾಮಿ ಯರ್ಟ್ ನಲ್ಲಿ ಮಲಗಲು ನಾಲ್ವರಿಗೆ ಅವಕಾಶವಿತ್ತು. ಸ್ವೀಟ್ ಬಾರ್, ಹೊರಾಂಗಣ ಸಿನಿಮಾ, ಕ್ಲೇ ಪಾರಿವಾಳ ಶೂಟಿಂಗ್, ಬರ್ಲೆಸ್ಕ್, ಸಿಗಾರ್ ಬಾರ್, ಫೇಸ್ ಪೇಂಟಿಂಗ್ ಚಟುವಟಿಕೆಯೂ ಈ ಲೈಂಗಿಕ ಉತ್ಸವದಲ್ಲಿತ್ತು.
ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ಸೋಂಕಿನ ಭೀತಿಯನ್ನೂ ಲೆಕ್ಕಿಸದೆ ಜನರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಸರ್ಕಾರದ ಮಾರ್ಗದರ್ಶನವು ಇಂಗ್ಲೆಂಡ್‌ನಲ್ಲಿ ಮದುವೆಗಳು ಮತ್ತು ಅಂತ್ಯಕ್ರಿಯೆಗಳಂತಹ ಮಹತ್ವದ ಕಾರ್ಯಕ್ರಮಗಳಿಗೆ ಹಾಜರಾಗಲು ಕೇವಲ 30 ಅತಿಥಿಗಳಿಗೆ ಮಾತ್ರ ಅನುಮತಿ ಕೊಟ್ಟಿದೆ. ಆದರೆ ಲೈಂಗಿಕ ಉತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.