
ಆಮೀರ್ ಖಾನ್ ಡಿವೋರ್ಸ್ ಸುದ್ದಿ ತಿಳಿಯುತ್ತಲೇ 'ಥ್ಯಾಂಕ್ ಗಾಡ್' ಎಂದ ನಟಿ ಸೋನಂ ಕಪೂರ್
Wednesday, July 7, 2021
ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ತಮ್ಮ ಎರಡನೆಯ ಪತ್ನಿಗೆ ವಿಚ್ಛೇದನ ನೀಡಿದ ಸುದ್ದಿ ತಿಳಿಯುತ್ತಲೇ ನಟಿ ಸೋನಂ ಕಪೂರ್ ‘ಥ್ಯಾಂಕ್ ಗಾಡ್’ ಎಂದು ಉದ್ಗರಿಸಿದ್ದಾರೆ.
ತಾವು ಯಾವುದೇ ಚಿತ್ರ ನಟನನ್ನು ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ‘ಥ್ಯಾಂಕ್ ಗಾಡ್' ನಾನು ಚಿತ್ರರಂಗದ ಯಾರೊಂದಿಗೂ ಸಂಬಂಧ ಬೆಳೆಸಿಲ್ಲ’ ಎಂದು ಸೋನಂ ಹೇಳಿದ್ದಾರೆ. ಸೋನಂ ಅವರು, ಉದ್ಯಮಿ ಆನಂದ್ ಅಹುಜಾ ಅವರನ್ನು 2018ರಲ್ಲಿ ಮದುವೆಯಾಗಿದ್ದಾರೆ. ಆನಂದ್ ಸ್ತ್ರೀಸಮಾನತಾವಾದಿ. ಮಹಿಳೆಯರಿಗೆ ಗೌರವ ಕೊಡುತ್ತಾರೆ. ಇಂಥವರನ್ನು ನಾನು ಆಯ್ಕೆ ಮಾಡಿಕೊಂಡಿರುವುದು ನನ್ನ ಪುಣ್ಯ. ನಾನು ನಿಜಕ್ಕೂ ಅದೃಷ್ಟಶಾಲಿ ಎಂದು ಸೋನಂ ಹೇಳಿದ್ದಾರೆ.
ಇವರು ಚಿತ್ರರಂಗದಲ್ಲಿ ಇಲ್ಲದ ವ್ಯಕ್ತಿಯನ್ನು ಮದುವೆಯಾಗುತ್ತಿದ್ದ ವೇಳೆಯೂ ಭಾರಿ ಸುದ್ದಿಯಾಗಿದ್ದರು. ಚಿತ್ರರಂಗದಲ್ಲಿ ಇರುವವರನ್ನೇ ಆಯ್ಕೆ ಮಾಡಿಕೊಳ್ಳಬಹುದಲ್ಲ ಎಂಬ ಪ್ರಶ್ನೆ ಅವರಿಗೆ ಆ ಸಮಯದಲ್ಲಿ ಎದುರಾಗಿತ್ತು. ಅದನ್ನು ನೆನೆಸಿಕೊಂಡಿರುವ ಸೋನಂ, ದೇವರು ದೊಡ್ಡವನು, ನಾನು ಅವರನ್ನು ಆಯ್ಕೆ ಮಾಡಿಕೊಂಡಿಲ್ಲ ಎಂದಿದ್ದಾರೆ.