ಗಂಡನ ಕಿರುಕುಳ ಸಹಿಸಲು ಆಗುತ್ತಿಲ್ಲ: ಪತಿಯ ವಿರುದ್ಧ ದೂರು ದಾಖಲಿಸಿದ ತಮಿಳು ನಟಿ..!!
Wednesday, July 7, 2021
ಚೆನ್ನೈ: ತಮಿಳು ನಟಿ ರಾಧಾ ಅವರು ಎರಡನೇ ಗಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ಎರಡನೇ ಬಾರಿ ದೂರು ದಾಖಲಿಸಿದ್ದಾರೆ. ಪ್ರತಿದಿನ ಗಂಡ ನೀಡುವ ಕಿರುಕುಳವನ್ನು ಸಹಿಸಲು ಆಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಮೂರು ತಿಂಗಳ ಪ್ರತಿದಿನ ಗಂಡ ಮನಬಂದಂತೆ ಥಳಿಸುತ್ತಾರೆ ಮತ್ತು ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಟಿ ರಾಧಾ ದೂರು ನೀಡಿದ್ದರು. ಈಗ ಮತ್ತೆ ತನ್ನ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ. ಮೂಲಗಳ ಪ್ರಕಾರ ಸಬ್ ಇನ್ಸ್ಪೆಕ್ಟರ್ ರಾಧಾ ಅವರ ಎರಡನೇ ಗಂಡ ಎಂದು ತಿಳಿದುಬಂದಿದೆ.
ತನಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ ಮತ್ತು ಅನುಮಾನ ಪಡುವುದು ಹಾಗೂ ದಾಂಪತ್ಯ ನಿಷ್ಠೆಯನ್ನು ಪ್ರಶ್ನಿಸುತ್ತಾರೆಂದು ದೂರಿದ್ದರು. ಸಬ್ ಇನ್ಸ್ಪೆಕ್ಟರ್ ಹೆಸರು ವಸಂತ್ರಾಜ್ (40) ಅವರು ರಾಧಾ ಅವರ ಎರಡನೇ ಗಂಡ ಎಂದು ತಿಳಿದುಬಂದಿದೆ. ರಾಧಾ ಅವರು ಪುರುಷ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಅವರೊಂದಿಗೆ ಓಡಾಡುವುದು ಸಬ್ ಇನ್ಸ್ಪೆಕ್ಟರ್ಗೆ ಇಷ್ಟವಿರಲಿಲ್ಲ ಎಂಬ ಮಾಹಿತಿ ಇದೆ. ಈ ಕಾರಣದಿಂದಲೇ ಆತ ರಾಧಾಗೆ ಮತ್ತು ಅವರ ತಾಯಿಗೆ ಬೆದರಿಕೆ ಹಾಕಲು ಆರಂಭಿಸಿದ ಎಂದು ತಿಳಿದುಬಂದಿದೆ.