ತೋಟಕ್ಕೆ ಹೋದ ಸಹೋದರಿಯರು ಸಂಜೆಯಾದರೂ ಬರಲಿಲ್ಲ..!! ಮುಂದಾಗಿದ್ದ ಅನಾಹುತ ಎಂಥದ್ದು ಗೊತ್ತಾ..??
Wednesday, July 7, 2021
ನಿರ್ಮಲ್ (ತೆಲಂಗಾಣ): ಸೆಲ್ಫಿ ತೆಗೆಯುಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂವರು ಸಹೋದರಿಯರು ದಾರುಣವಾಗಿ ಮೃತಪಟ್ಟಿರುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ನಡೆದಿದೆ.
ಸ್ಮಿತಾ (17), ವೈಶಾಲಿ (14) ಮತ್ತು ಅಂಜಲಿ (16) ಈಜು ಬರದೇ ದುರಂತ ಸಾವಿಗೀಡಾಗಿದ್ದಾರೆ. ಸ್ಮಿತಾ ಮತ್ತು ವೈಶಾಲಿ ತಮ್ಮ ತಾಯಿಯ ಜತೆ ತೋಟಕ್ಕೆ ತೆರಳಿದರು. ಹೋಗುವಾಗ ತಮ್ಮ ಜತೆಯಲ್ಲಿ ಸೋದರಸಂಬಂಧಿ ಅಂಜಲಿಯನ್ನು ಕರೆದುಕೊಂಡು ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ತಾಯಿ ಮನೆಗೆ ಹಿಂದಿರುಗಿದರೆ, ಮೂವರು ಸಹೋದರಿಯರು ಅಲ್ಲಿಯೇ ಇದ್ದ ಕೆರೆಯ ಬಳಿಗೆ ತೆರಳಿದರು. ಈ ವೇಳೆ ಸೆಲ್ಫಿ ತೆಗೆಯುವಾಗ ಮೂವರು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದಿದ್ದಾರೆ. ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ತೋಟಕ್ಕೆ ತೆರಳಿದ ಮಂಗಳಬಾಯಿ ಮಕ್ಕಳಿಗಾಗಿ ಹುಡುಕಾಡಿದ್ದಾರೆ. ಅವರು ಪತ್ತೆಯಾಗದಿದ್ದಾಗ ಸಂಬಂಧಿಕರಿಗೆ ಆಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ಕುಟುಂಬದ ಸದಸ್ಯರು ಕೆರೆಯ ಸಮೀಪ ಹೋಗಿ ನೋಡಿದಾಗ ಮೂವರೂ ಕೂಡ ಶವವಾಗಿ ಕೆರೆಯಲ್ಲಿ ತೇಲುತ್ತಿದ್ದರು. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.