
ಆಸ್ತಿ ಸಮಸ್ಯೆ ಬಗೆಹರಿಸಲು ಮಾಟಮಂತ್ರ ಮಾಡಲು 2 ಲಕ್ಷ ಕೇಳಿದ ಮಂತ್ರವಾದಿಗೆ ಬಿತ್ತು ಧರ್ಮದೇಟು!
Wednesday, July 7, 2021
ಕೊಪ್ಪಳ: ಆಸ್ತಿ ವಿಷಯವನ್ನು ಬಗೆಹರಿಸಿ ಕೊಡುತ್ತೇನೆ ಇದಕ್ಕಾಗ. ಮಾಟ- ಮಂತ್ರ ಮಾಡಿಸಲು ಮಹಿಳೆಯೊಬ್ಬರಿಂದ 2 ಲಕ್ಷ ರೂ. ಹಣ ಕೇಳಿದ ಮಂತ್ರವಾದಿಗೆ ಜನರು ಥಳಿಸಿರುವ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ.
ಹಂದ್ರಾಳದ ಚಂದನಗೌಡ ಎಂಬ ಮಂತ್ರವಾದಿ ಮಹಿಳೆಯೊಬ್ಬಳಿಗೆ ನಿಮ್ಮ ಆಸ್ತಿ ವಿಚಾರ ಸರಿ ಮಾಡಿಕೊಡುವುದಾಗಿ ಹೇಳಿ ಮಹಿಳೆಯಿಂದ ಮೊದಲು 50 ಸಾವಿರ ರೂಪಾಯಿ ಹಣ ಪಡೆದುಕೊಂಡಿರುವ ಈ ಮಂತ್ರವಾದಿ ನಂತರ ಎರಡು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ.
ಮಹಾದೇವಿ ಎಂಬ ಮಹಿಳೆಗೆ ಅಣ್ಣಂದಿರೊಂದಿಗೆ ಆಸ್ತಿಯ ವಿಷಯಕ್ಕೆ ಜಗಳ ಇತ್ತು. ಇದನ್ನು ಬಗೆಹರಿಸಿ ಕೊಡಬೇಕೆಂದು ಮಹಾದೇವಿ ಈತನ ಮೊರೆ ಹೋಗಿದ್ದರು. ಮೊದಲು ಹಣ ಪಡೆದಿದ್ದ ಈತ ಹೆಚ್ಚಿನ ಹಣದ ಬೇಡಿಕೆ ಒಡ್ಡಿದ್ದ. ಆಸ್ತಿ ವಿಷಯವನ್ನು ಬಗೆಹರಿಸುವುದಾಗಿ ಹೇಳಿ ಮಾಟ- ಮಂತ್ರ ಮಾಡಿಸಲು ಮಹಿಳೆಯೊಬ್ಬರಿಂದ 50 ಸಾವಿರ ರೂಪಾಯಿ ಪಡೆದು 2 ಲಕ್ಷ ರೂ. ಹಣ ಕೇಳಿದ ಮಂತ್ರವಾದಿ ಚಂದನಗೌಡಂಗೆ ಜನರು ಥಳಿಸಿರುವ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ.