Mangalore- ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕಿ ಬರ್ತೇನೆ ಎಂದು ಹೋದ 19 ವರ್ಷದ ಯುವತಿ ನಾಪತ್ತೆ!
Wednesday, July 7, 2021
ಮಂಗಳೂರು: ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕಿ ಬರ್ತೇನೆ ಮನೆಯಿಂದ ತೆರಳಿರುವ ಯುವತಿಯೋರ್ವಳು ಮತ್ತೆ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ನಾಡು ಗ್ರಾಮದ ಶೆಟ್ಟಿ ತೋಟ ಧರ್ಮಸ್ಥಾನದ ಬಳಿಯ ನಿವಾಸಿ ಯುಕ್ತಾ(19) ನಾಪತ್ತೆಯಾಗಿರುವ ಯುವತಿ.
ನಾಪತ್ತೆಯಾಗಿರುವ ಯುವತಿ ತಮ್ಮ ದೊಡ್ಡಮ್ಮನ ಮಗಳು ಆಶಾ ಎಂಬವರೊಂದಿಗೆ ವಾಸಿಸುತ್ತಿದ್ದರು. ಪ್ರಸ್ತುತ ಆನ್ಲೈನ್ ತರಗತಿಗಳು ಇರುವುದರಿಂದ ಜುಲೈ 06 ರಂದು ಬೆಳಗ್ಗೆ 9.30 ಸುಮಾರಿಗೆ ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕಿಸಿ ಬರುತ್ತೇನೆಂದು ಮುಲ್ಕಿಗೆ ತೆರಳಿದವಳು ವಾಪಾಸ್ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾಳೆ ಎಂದು ಆಶಾ ದೂರು ನೀಡಿದ್ದಾರೆ.
ಕಾಣೆಯಾದ ಯುಕ್ತಾ 19 ವರ್ಷದವರಾಗಿದ್ದು, 5.4 ಅಡಿ ಎತ್ತರವಿದ್ದಾರೆ. ಗೋಧಿ ಮೈಬಣ್ಣ, ಸಪೂರ ಶರೀರವಿದ್ದು, ಪಿಂಕ್ ಮತ್ತು ಕಪ್ಪು ಬಣ್ಣದ ಪ್ಯಾಂಟ್, ಬಣ್ಣದ ಟಾಪ್ ಧರಿಸಿದ್ದಾರೆ. ಇವರ ಗುರುತು ಪತ್ತೆಯಾದವರು ಮುಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.