ಶಾಲೆಯ ಅಡುಗೆ ಸಹಾಯಕಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಶಿಕ್ಷಕ ಅಮಾನತು!
Wednesday, July 7, 2021
ದಾವಣಗೆರೆ : ಶಾಲೆಯ ಶಿಕ್ಷಕನೊಬ್ಬ ಅಡುಗೆ ಸಹಾಯಕಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದು ಆ ಫೋಟೋ ವೈರಲ್ ಆಗಿದೆ ಆದ್ದರಿಂದ ಆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗೋಗುದ್ದ ಸರ್ಕಾರಿ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ.
ಶಿಕ್ಷಕ ಆಂಜನೇಯ ನಾಯಕ್ ಅಮಾನತು ಗೊಂಡಿದ್ದಾನೆ.
ಅಡುಗೆ ಸಹಾಯಕಿರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರ ಜೊತೆ ಪೊಟೋ ತೆಗೆಸಿಕೊಳ್ಳುತಿದ್ದ ಎನ್ನಲಾಗಿದೆ.ಪೋಟೋ ತೆಗೆದು ಅವುಗಳನ್ನ ಶಿಕ್ಷಕರು ಇರೋ ಗ್ರೂಪ್ ಗಳಿಗೆ ಹರಿ ಬಿಡುತಿದ್ದ ಆಂಜನೇಯ,ಕುಡಿದು ಶಾಲೆಗೆ ಆಗಮಿಸಿ ಮಕ್ಕಳ ಕೈಯಲ್ಲಿಯೇ ಗುಟ್ಕಾ ತರೆಸುತಿದ್ದ ಎಂದು ಗ್ರಾಮಸ್ಥರು ಡಿಸಿಗೆ ಪತ್ರ ಬರೆದಿದ್ದರು. ಈತ ಅಧಿಕಾರಿಗಳ ಕೈ-ಕಾಲು ಹಿಡಿದು ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದ.
ಇದರಿಂದ ಬೇಸತ್ತ ಗ್ರಾಮಸ್ಥರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದ ಗೋಗುದ್ದ ಸಚಿವರ ಸೂಚನೆ ಮೆರೆಗೆ ಈಗ ಶಿಕ್ಷಕ ಆಂಜನೇಯ ಅಮಾನತುಗೊಂಡಿದ್ದಾನೆ.