ಸಮಂತ - ನಾಗ ದಾಂಪತ್ಯದಲ್ಲಿ ಬಿರುಕು ಮೂಡಿದ್ಯಾ..?? ಕುತೂಹಲ ಹುಟ್ಟಿಸಿದೆ ನಟಿಯ ಇನ್ಸ್ಟಾಗ್ರಾಮ್...
Saturday, July 31, 2021
ಹೈದರಾಬಾದ್: ತಮಿಳು ಮತ್ತು ತೆಲುಗು ಚಿತ್ರರಂಗದ ನಟಿ ಸಮಂತಾ ಅಕ್ಕಿನೇನಿ ತಮ್ಮ ಹೆಸರಿನ ಮುಂದೆ ಇದ್ದ ಅಕ್ಕಿನೇನಿ ಹೆಸರನ್ನು ತೆಗೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ಖಾತೆಗಳನ್ನು ಅಕ್ಕಿನೇನಿ ಹೆಸರನ್ನು ತೆಗೆದುಹಾಕಿದ್ದು, ಫೇಸ್ಬುಕ್ನಲ್ಲಿ ಉಳಿಸಿಕೊಂಡಿದ್ದಾರೆ. ಸಮಂತಾ ಮತ್ತು ನಟ ನಾಗಚೈತನ್ಯ 2017ರಲ್ಲಿ ಸಪ್ತಪದಿ ತುಳಿದಿದ್ದಾರೆ.
ಸಮಂತಾ ಇನ್ಸ್ಟಾಗ್ರಾಂ ಮತ್ತು ಟ್ವಿಟರ್ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿರುವುದು ವಿವಾದವನ್ನು ಹುಟ್ಟು ಹಾಕಿದೆ. ಸಮಂತಾ ಮತ್ತು ನಾಗ ಚೈತನ್ಯ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟಿದೆಯೇ ಎಂಬ ಊಹಾಪೋಹಾ ಹರಿದಾಡತೊಡಗಿದೆ.