ಕೊಳ್ಳುವವರು ಯಾರೂ ಸಿಗಲಿಲ್ಲ ಎಂದು ಮೂರು ವರ್ಷದ ಮಗನನ್ನೇ ಕೊಂದ ಪಾಪಿ ತಂದೆ..!!
Saturday, July 31, 2021
ನವದೆಹಲಿ: ಬಡತನದಿಂದಾಗಿ ತನ್ನ ಮೂರು ವರ್ಷದ ಮಗನನ್ನೇ ತಂದೆ ಮಾರಾಟಕ್ಕಿಟ್ಟಿದ್ದುಆತನನ್ನು ಖರೀದಿಸುವವರು ಯಾರೂ ಸಿಗಲಿಲ್ಲವೆಂದು ನೊಂದು ಕೊಂದು ಹಾಕಿದ್ದಾನೆ.
ಮೊಹಮದ್ ನೌಷಾದ್ ಎಂಬಾತ ಮಗನನ್ನೇ ಕೊಂದ ತಂದೆ. ಬಡತನದಿಂದ ಬಳಲುತ್ತಿದ್ದ ಮೊಹಮದ್ ನೌಷಾದ್ ಕುಡಿತ ಹಾಗೂ ಜೂಜಿನ ಚಟ ಹೊಂದಿದ್ದ. ಅದಕ್ಕೆ ಹಣ ಹೊಂದಿಸಲಾಗದೆ ತನ್ನ ಮೂರು ವರ್ಷದ ಮಗನನ್ನು ಮೂರು ಲಕ್ಷ ರೂಪಾಯಿಗೆ ಮಾರಾಟಕ್ಕಿಟ್ಟಿದ್ದ. ಈ ಬಗ್ಗೆ ಪತ್ನಿಯ ವಿರೋಧ ಇದ್ದಿದ್ದರಿಂದ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಆದರೆ ಮಂಗಳವಾರ ನೆರೆಮನೆಯಿಂದ ಮೊಬೈಲ್ ಫೋನ್ ಚಾರ್ಜರ್ ತರಲು ಹೆಂಡತಿಯನ್ನು ಕಳಿಸಿದ್ದ ನೌಷಾದ್, ಆಕೆ ಮರಳುವಷ್ಟರಲ್ಲಿ ಮಗನನ್ನು ಕೊಂದು ಹಾಕಿದ್ದಾನೆ.
ನೌಷಾದ್ನ ಈ ಕೃತ್ಯದ ಕುರಿತು ಆತನ ತಂದೆಯೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನೌಷಾದ್ನನ್ನು ಬಂಧಿಸಿದ್ದಾರೆ.