ತಮ್ಮಂದಿರಿಗೂ ಹೆಂಡ್ತಿ ಆಗುವಂತೆ ಗಂಡನ ಒತ್ತಾಯ... ಆಕೆ NOOO ಎಂದಿದ್ದಕ್ಕೆ ಆಯ್ತು ಅನಾಹುತ..!!
Saturday, July 31, 2021
ಯಮುನಾನಗರ (ಹರಿಯಾಣ): ಗಂಡ ಮತ್ತು ಆತನ ಇಬ್ಬರು ಸಹೋದರರು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆಂದು ವಿವಾಹಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿತ್ತು. ನಂತರ ಗಂಡ, ಸಣ್ಣಪುಟ್ಟ ವಿಚಾರಕ್ಕೂ ಜಗಳ ಮಾಡಲು ಶುರು ಮಾಡಿದ್ದಾನೆ. ಜತೆಗೆ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಪೀಡಿಸಲು ಆರಂಭಿಸಿದ್ದಾನೆ.ಇದರ ಬೆನ್ನಲ್ಲೇ ಮಹಿಳೆ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಕೆಲ ತಿಂಗಳ ಕಾಲ ಪೋಷಕರ ಮನೆಯಲ್ಲಿ ಉಳಿದುಕೊಂಡ ಸಂತ್ರಸ್ತ ಮಹಿಳೆ ವಾಪಸ್ ಆಗಿದ್ದಾರೆ.
ಈ ವೇಳೆ ಮತ್ತೆ ಮತ್ತೆ ಕಿರುಕುಳ ನೀಡಲು ಶುರುವಿಟ್ಟುಕೊಂಡಿದ್ದಾನೆ. ಜತೆಗೆ ತನ್ನ ಸಹೋದರರಿಗೂ ಹೆಂಡ್ತಿಯಾಗಿರುವಂತೆ ತಿಳಿಸಿದ್ದಾನೆ. ಇದಕ್ಕೆ ನಿರಾಕರಣೆ ಮಾಡುತ್ತಿದ್ದಂತೆ ಕಳೆದ ಕೆಲ ದಿನಗಳ ಹಿಂದೆ ಮನೆಯಲ್ಲಿ ಕೂಡಿ ಹಾಕಿರುವ ಮೂವರು, ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಅಮಾನವೀಯತೆ ಮೆರೆದಿದ್ದಾರೆ.ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.