ಕೇರಳ: ವೈದ್ಯಕೀಯ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದು..ನಂತರ ತಾನು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ!!
Saturday, July 31, 2021
ಕಾಸರಗೋಡು: ಇಂದಿರಾ ಗಾಂಧಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿಯನ್ನು ಯುವಕನೋರ್ವ ಗುಂಡಿಕ್ಕಿ ಕೊಲೆಗ್ಯೆದು ನಂತರ ತಾನು ಆತ್ಮಹತ್ಯೆಗೊಳಗಾದ ಭೀಭತ್ಸ ಘಟನೆ ಎರ್ನಾಕುಳಂ ಜಿಲ್ಲೆಯ ಕೋದಮಂಗಲಂನಲ್ಲಿ ವರದಿಯಾಗಿದೆ.
ಕಣ್ಣೂರು ಮೂಲದ ಮಾನಸಾ (24) ಹತ್ಯೆಗೊಳಗಾದ ವಿದ್ಯಾರ್ಥಿನಿ. ಹತ್ಯೆಗ್ಯೆದ ಬಳಿಕ ರಾಗಿನ್ (28) ಎಂಬಾತ ಸ್ವತಃ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ವಸತಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದಾನೆ. ರಾಗಿನ್ ಮಾನಸಾರ ಸ್ನೇಹಿತ ಎನ್ನಲಾಗಿದೆ. ಕೊಲೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.