ಒಬ್ಬಳು ಭಾವಿಪತ್ನಿ.. ಇನ್ನೊಬ್ಬಳು ಮಾಜಿ ಲವರ್..!! ಈತನಿಗೆ ಒಲಿದು ಬಂದ ಅದೃಷ್ಟ ಎಂಥದ್ದು ಗೊತ್ತಾ?
Saturday, July 31, 2021
ಸಾಮಾಜಿಕ ಜಾಲತಾಣಗಳಿಂದ ತನ್ನ ಎಕ್ಸ್ ಬಾಯ್‌ಫ್ರೆಂಡ್ ಮದುವೆ ಎಂದು ಅರಿತ ಪ್ರೇಯಸಿ ಸೀದ ಮದುವೆ ಮನೆಗೆ ಬಂದಿದ್ದಾಳೆ.
ಎಕ್ಸ್‌ಬಾಯ್‌ಫ್ರೆಂಡ್ ಕೋರಿಕ್ ಅಕ್ಬರ್ ಮದುವೆ ಫಿಕ್ಸ್ ಆದ ಹುಡುಗಿ ನೂರ್ ಖುಷ್ನುಲ್ ಹಾಗೂ ಮಾಜಿ ಪ್ರೇಯಸಿ ಯುನಿರಾ ರೂರಿ ಇಬ್ಬರನ್ನೂ ಮದುವೆಯಾಗಿದ್ದಾನೆ.
2016 ರಲ್ಲಿ ಯುನಿತಾ ಹಾಗೂ ಕೋರಿಕ್‌ನ ಬ್ರೇಕಪ್ ಆಗಿತ್ತು. ಸಡನ್ ಆಗಿ ಹಳೆ ಹುಡುಗಿಯನ್ನ ಕಂಡ ಕೋರಿಕ್ ಶಾಕ್ ಆಗಿದ್ದಾನೆ. ಭಾವಿ ಪತ್ನಿ ಹಾಗೂ ಮನೆಯವರ ಜೊತೆ ಮಾತನಾಡಿ ಇಬ್ಬರನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾನೆ.
ಕೋರಿಕ್ ಮದುವೆಯ ನಂತರ ಕೈಯಲ್ಲಿ ಕೆಲಸವೇ ಇಲ್ಲದೆ ಇಬ್ಬರು ಹೆಂಡತಿಯರನ್ನು ಹೇಗೆ ಸಾಕಲಿ ಎಂದು ಚಿಂತೆಗೀಡಾಗಿ ತಾನು ತೆಗೆದುಕೊಂಡ ನಿರ್ಧಾರಕ್ಕೆ ಪಶ್ಚಾತ್ತಾಪ ಪಟ್ಟಿದ್ದಾನೆ.