ಗರ್ಭದಲ್ಲಿ ಮಗು, ಪ್ರಿಯಕರನಿಗಾಗಿ ಸಾವಿರ ಕಿಲೋಮೀಟರ್ ಅಲೆದಾಟ..ಪಾಪ ಈ ಗರ್ಭಿಣಿಯ ಗೋಳು ಅಷ್ಟಿಷ್ಟಲ್ಲ...
Saturday, July 31, 2021
ನೋಯ್ಡಾ: ಗರ್ಭಿಣಿಯೊಬ್ಬಳು ತನ್ನ ಪ್ರೇಮಿಯನ್ನು ಹುಡುಕುತ್ತಾ 1,100 ಕಿಲೋ ದೂರ ಬಂದಿರುವ ಘಟನೆ ನಡೆದಿದೆ.
ಒಂದೂವರೆ ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ್ದ ಜೋಡಿ ಯುವತಿ ಗರ್ಭವತಿಯಾಗಿದ್ದಾಳೆ ಎಂಬ ವಿಷಯ ತಿಳಿದು ಪ್ರಿಯಕರ ಎಸ್ಕೇಪ್ ಆಗಿದ್ದಾನೆ. ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ನವದೇಪುರ್ ಹಳ್ಳಿಯ ಯುವತಿಗೆ ನೋಯ್ಡಾದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಶುತೋಷ್ ಸಿಂಗ್ ಎಂಬಾತನ ಜೊತೆ ಪ್ರೀತಿ ಆಗುತ್ತೆ. ಆತ ಮದುವೆಯಾಗುವುದಾಗಿ ನಂಬಿಸಿ ತನಗೆ ಆತ ಮೋಸ ಮಾಡಿರುವ ವಿಷಯ ಯುವತಿಗೆ ಗರ್ಭಧರಿಸಿದ ಮೇಲೆ ತಿಳಿದಿದೆ. ಮೂರು ತಿಂಗಳ ಗರ್ಭಿಣಿ ಎಂದು ತಿಳಿಯುತ್ತಲೇ ಮದುವೆಗೆ ಒತ್ತಾಯಿಸಿದ್ದಾಳೆ ಯುವತಿ. ಆದರೆ ಅಶುತೋಷ್ ಆ ಮಗುವನ್ನು ಗರ್ಭಪಾತ ಮಾಡಿಸು ಎಂದಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.
ಯುವತಿ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಉತ್ತರ ಪ್ರದೇಶದ ನೋಯ್ಡಾದಿಂದ ಬಿಹಾರಕ್ಕೆ ಸುಮಾರು 1,100 ಕಿ,ಮೀ ದೂರವಿದ್ದು, ಅಲ್ಲಿಗೆ ಮಹಿಳೆ ಪ್ರಯಾಣ ಬೆಳೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲು ಮಾಡಿದ ನಂತರ, ಪೊಲೀಸರು ಅಶುತೋಷ್ನ ಜಾಡನ್ನು ಹಿಡಿದು ಹೋದಾಗ ಆತ ಬಿಹಾರ್ದಲ್ಲಿ ಇರುವುದು ತಿಳಿದಿದೆ.