
ಪತ್ನಿ ವಿಚ್ಛೇದನ ಕೇಳಿದಳೆಂದು ಮನನೊಂದು ಬಾವಿಗೆ ಹಾರಿದ ಗಂಡ....
ತಿಪಟೂರು: ವಿಚ್ಛೇದನ ಬೇಕು ಎಂದ ಪತ್ನಿ ಮಾತಿಗೆ ಮನನೊಂದು ಗಂಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಸಮೀಪದ ಮಡೇನೂರು ಕಾಲೋನಿಯಲ್ಲಿ ಸಂಭವಿಸಿದೆ.
ಅರಸೀಕೆರೆ ತಾಲೂಕು ನಾರಾಯಣಘಟ್ಟಿಹಳ್ಳಿ ನಿವಾಸಿ ಗಂಗಾಧರ್ (39) ಮೃತ ದುರ್ದೈವಿ. ಈತನಿಗೆ 17 ವರ್ಷದ ಹಿಂದೆ ಅನಿತಾ ಎಂಬಾಕೆ ಜತೆ ಮದುವೆ ಆಗಿತ್ತು. ಕೌಟುಂಬಿಕ ಕಲಹದಿಂದ ಪತಿಯನ್ನು ತೊರೆದಿದ್ದ ಅನಿತಾ, 7 ವರ್ಷದ ಹಿಂದೆಯೇ ತವರು ಸೇರಿದ್ದಳು. ಈ ನಡುವೆ ಪತ್ನಿ ತುರುವೇಕೆರೆ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಂತದಲ್ಲಿ ಇತ್ತು. ಪತ್ನಿ ದೂರಾವಾಗುತ್ತಾಳೆ ಎಂದು ಮನನೊಂದ ಗಂಗಾಧರ್, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮಾಂತರ ಠಾಣೆ ಎಸ್ಐ ಕೃಷ್ಣಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.