-->
ಬೇರೊಬ್ಬನೊಂದಿಗೆ ಓಡಿಹೋದ ಮಗನ ಹೆಂಡತಿಯನ್ನು ಕೊಂದು ಠಾಣೆಗೆ ಶರಣಾದ ಮಾವ..

ಬೇರೊಬ್ಬನೊಂದಿಗೆ ಓಡಿಹೋದ ಮಗನ ಹೆಂಡತಿಯನ್ನು ಕೊಂದು ಠಾಣೆಗೆ ಶರಣಾದ ಮಾವ..


ಪೂರ್ವ ಗೋದಾವರಿ : ಸೊಸೆ ಬೇರೆ ಯುವಕನೊಂದಿಗೆ ಓಡಿ ಹೋದಳೆಂದುುು ಆಕೆಯನ್ನು ಮಾವ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆೆ.

ಪ್ರಿಯಾಮಣಿ (25) ಮೃತ ದುರ್ದೈವಿ. ಈಕೆಯ ಮದುವೆ ವಿಜಯ್ಕುಮಾರ್ ಎಂಬಾತನೊಂದಿಗೆ ಆಗಿದ್ದು ಈ ದಂಪತಿಗೆ ಒಬ್ಬ ಮಗನಿದ್ದಾನೆ.ವಿಜಯ್​ಕುಮಾರ್​ ಕೆಲಸದ ನಿಮಿತ್ತವಾಗಿ ಕತಾರ್​ಗೆ ತೆರಳಬೇಕಾಯಿತು.ಮನೆಯಲ್ಲಿ ಒಂಟಿಯಾಗಿದ್ದ ಪ್ರಿಯಾಮಣಿಗೆ ಯುವಕನೊಬ್ಬನ ಪರಿಚಯವಾಗಿದೆ. ಬಳಿಕ ಇವರ ಪರಿಚಯದಿಂದಾಗಿ ಪ್ರಿಯಾ ಜೊತೆ ಆ ಯುವಕ ಬಹಳ ಸಲುಗೆಯಿಂದಿರುತ್ತಿದ್ದ. ಇಬ್ಬರು ಪ್ರೀತಿಯಲ್ಲಿದ್ದರು ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಈ ತಿಂಗಳು 22 ರಂದು ಪ್ರಿಯಾಮಣಿ ಆ ಯುವಕನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಸೊಸೆ ಪ್ರಿಯಾಮಣಿ ನಾಪತ್ತೆಯಾಗಿದ್ದಾಳೆ ಎಂದು ಮಾವ ಸತ್ಯನಾರಾಯಣ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಪೊಲೀಸರು ಅವರಿಬ್ಬರನ್ನು ಹುಡುಕಿ ವಾಪಸ್​ ಕರೆಸಿ ಕೌನ್ಸಿಲಿಂಗ್​ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಿದ್ದರು. ನಂತರ ಮನೆಯಲ್ಲಿ ಮಾವ ಮತ್ತು ಸೊಸೆಯ ನಡುವೆ ಜಗಳವಾಗಿದೆ. ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿದ್ದು, ಮಾವ ಸತ್ಯನಾರಾಯಣ ಸೊಸೆ ಪ್ರಿಯಾಮಣಿಗೆ ಚಾಕುವಿನಿಂದ ಹಲವಾರು ಬಾರಿ ಚುಚ್ಚಿ ಕೊಲೆ ಮಾಡಿದ್ದಾರೆ. 

ಕೊಲೆ ಮಾಡಿದ ಬಳಿಕ ಸತ್ಯನಾರಾಯಣ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾದರು. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99