ಬಾಡಿಗೆ ಬೇಡ, ಪತಿ ಇಲ್ಲದಾಗ ಬಂದು ಕಿಸ್ ಕೊಡು ಎಂದ ಮಾಲಿಕ ಈಗ..
Friday, July 9, 2021
ಚೆನ್ನೈ: ದಂಪತಿಯೊಬ್ಬರಿಗೆ ಬಾಡಿಗೆ ನೀಡಿದ ಮನೆ ಮಾಲೀಕ ಪತಿ ಇಲ್ಲದಾಗ ಬಂದು ಕಿಸ್ ಕೊಡು, ಬಾಡಿಗೆ ಕೊಡುವುದು ಬೇಡ ಎಂದು ಮಹಿಳೆಗೆ ಕಿರುಕುಳ ನೀಡುತ್ತಿದ್ದು, ಇದೀಗ ಜೈಲಿನಲ್ಲಿ ಇರುವ ಘಟನೆ ಚೆನ್ನೈನ ಕೊಡುಂಗೈಯೂರ್‌ನಲ್ಲಿ ನಡೆದಿದೆ.
ಜಯಕುಮಾರ್ ಎಂಬ ಮಾಲೀಕನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾಳೆ .ಜಯಕುಮಾರ್ ಆಟೋ ಚಾಲಕರಾಗಿರುವರೊಬ್ಬರಿಗೆ ಮನೆ ಬಾಡಿಗೆ ನೀಡಿದ್ದಾರೆ. ಚಾಲಕ ಮತ್ತು ದಂಪತಿ ಮಾತ್ರ ಆ ಮನೆಯಲ್ಲಿ ವಾಸವಾಗಿದ್ದರು. ಗಂಡ ಕೆಲಸಕ್ಕೆ ಹೋದ ಸಮಯದಲ್ಲಿ ಪದೇ ಪದೇ ಬಂದು ಜಯಕುಮಾರ್ ಕಿಸ್ ಕೊಡು, ಕಿಸ್ ಕೊಡು ಎಂದು ಕಿರುಕುಳ ನೀಡುತ್ತಿದ್ದ. ನಿನ್ನೆ ಮಹಿಳೆ ಒಬ್ಬರೇ ಇರುವಾಗ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯನ್ನು ಬಲವಂತವಾಗಿ ಹಿಡಿದು ಬಾಡಿಗೆ ಕೊಡುವುದು ಬೇಡ, ಕಿಸ್ ಕೊಡು ಸಾಕು ಎಂದು ಪೀಡಿಸಿದ್ದಾನೆ.
ಮಹಿಳೆ ಆತನನ್ನು ಹೊರಕ್ಕೆ ತಳ್ಳಿ ಪೊಲೀಸರಲ್ಲಿ ದೂರು ದಾಖಲಿಸಿದರು. ಸದ್ಯ ಜಯಕುಮಾರ್‌ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.