ಬೈಕ್ ಮತ್ತು ಮೊಬೈಲ್ ತೆಗೆದುಕೊಡಲಿಲ್ಲ ಎಂದು ಪಿಯು ವಿದ್ಯಾರ್ಥಿ ಸೂಸೈಡ್!
Friday, July 9, 2021
ಅನಂತಪುರ್: ಬೈಕ್ ಮತ್ತು ಮೊಬೈಲ್ ತೆಗೆದು ಕೊಡಲಿಲ್ಲ ಎಂದು ಪಿಯು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ್ ಜಿಲ್ಲೆಯ ಗಂಡ್ಲಪೆಂಟಾದಲ್ಲಿ ಗುರುವಾರ ನಡೆದಿದೆ.
ರೆಡ್ಡಿ ಭಾಷಾ (18) ಆತ್ಮಹತ್ಯೆ ಮಾಡಿಕೊಂಡವ.ಈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಬೈಕ್ ಮತ್ತು ಮೊಬೈಲ್ಬೇಕೆಂದು ತನ್ನ ತಂದೆ ನಬಿಯನ್ನು ಕೇಳಿದ್ದ. ಆದರೆ, ಆರ್ಥಿಕವಾಗಿ ಭಾಷಾ ಕುಟುಂಬ ಹಿಂದುಳಿದಿದ್ದರಿಂದ ತಂದೆ ನಿರಾಕರಿಸಿದರು. ಇದರಿಂದ ಮನನೊಂದ ಭಾಷಾ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ.
ಆತನನ್ನು ಕದಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅನಂತಪುರ್ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.