
ಆರಂಭವಾಯಿತು ಹೊಸ ಶೋ-ಕಲರ್ಸ್ ಕನ್ನಡದಲ್ಲಿ ರಿಯಲ್ ಜೋಡಿಗಳ ರಿಯಾಲಿಟಿ ಶೋ 'ರಾಜಾ ರಾಣಿ'
Saturday, July 10, 2021
ಬೆಂಗಳೂರು: ಸೆಲೆಬ್ರಿಟಿ ಕಪಲ್ಸ್ಗಳ 'ರಾಜಾ ರಾಣಿ' ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರತಿ ಶನಿವಾರ ಹಾಗೂ ಭಾನುವಾರದಂದು ರಾತ್ರಿ 7.30 ರಿಂದ 9ರವರೆಗೆ ಪ್ರಸಾರವಾಗಲಿದೆ.
ಈ ಶೋನಲ್ಲಿ ಕಿರುತೆರೆಯ ರಿಯಲ್ ಜೋಡಿಗಳು ಭಾಗವಹಿಸಿಲಿವೆ. ಇದರಲ್ಲಿ 12 ರಿಯಲ್ ಜೋಡಿಗಳಿದ್ದು, ನೇಹಾ ಗೌಡ-ಚಂದನ್, ದೀಪಿಕಾ-ಆಕರ್ಷ್, ನಿವೇದಿತಾ ಗೌಡ-ಚಂದನ್ ಶೆಟ್ಟಿ, ಶ್ರಾವಣಿ-ಸಮೀರಾಚಾರ್ಯ, ಅಯ್ಯಪ್ಪ-ಅನು, ಇಶಿತಾ-ಮುರುಗ, ರೂಪಾ-ಪ್ರಶಾಂತ್, ವಿಶೇಷವೆಂದರೆ ಇಬ್ಬರು ಪತ್ನಿಯರೊಂದಿಗೆ ರಾಜು ತಾಳಿಕೋಟೆಯವರು ಈ ಶೋಗೆ ಬರುವುದು ಪ್ರಮುಖ ಆಕರ್ಷಣೆಯಾಗಿದೆ.
'ರಾಜಾ ರಾಣಿ' ರಿಯಾಲಿಟಿ ಶೋ
16 ವಾರಗಳ ಕಾಲ, 36 ಎಪಿಸೋಡ್ಗಳು ಮೂಡಿ ಬರಲಿವೆ. ರಿಯಲ್ ಕಪಲ್ಸ್ ತಮ್ಮ ರಿಯಲ್ ಜೀವನದ ಬಗ್ಗೆ ಹಂಚಿಕೊಳ್ಳಲಿದ್ದಾರೆ. ರಾಜಾ ರಾಣಿ ರಿಯಾಲಿಟಿ ಶೋಗೆ ಪ್ರಕಾಶ್ ನಿರ್ದೇಶನವಿದೆ. ಸೆಟ್ನ ವೇದಿಕೆಗೆ ಬಂದ ಬಳಿಕವೇ ಟಾಸ್ಕ್ ನೀಡಲಾಗುತ್ತದೆ. ಹೀಗಾಗಿ, ಕಪಲ್ಸ್ಗಳು ತಯಾರಾಗಿ ಬರಲು ಸಾಧ್ಯವಿಲ್ಲ. ರಿಯಲ್ ಆಗಿಯೇ ಟಾಸ್ಕ್‌ಗಳನ್ನು ಮಾಡುವ ಮೂಲಕ ತಾವೂ ತಾವಾಗಿಯೇ ಇರುತ್ತಾರೆ. ರಿಯಾಲಿಟಿ ಶೋನ ಜಡ್ಜ್ಗಳಾಗಿ ಸೃಜನ್ ಲೋಕೇಶ್ ಹಾಗೂ ತಾರಾ ಅನುರಾಧ ಇರಲಿದ್ದಾರೆ. ಜತೆಗೆ ಅನುಪಮಾ ಗೌಡ ನಿರೂಪಣೆ ಮಾಡಲಿದ್ದಾರೆ.