-->
40 ವರ್ಷ ಈ ಸ್ನೇಹಿತರು ಧರಿಸುತ್ತಿದ್ದಾರೆ ಮ್ಯಾಚಿಂಗ್ ಡ್ರೆಸ್- ಇಲ್ಲಿದೆ ಅಪರೂಪದ ಗೆಳೆಯರ ಕಥೆ!

40 ವರ್ಷ ಈ ಸ್ನೇಹಿತರು ಧರಿಸುತ್ತಿದ್ದಾರೆ ಮ್ಯಾಚಿಂಗ್ ಡ್ರೆಸ್- ಇಲ್ಲಿದೆ ಅಪರೂಪದ ಗೆಳೆಯರ ಕಥೆ!

 
ಆಲಪ್ಪುಳ: ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಳಂನ ಇಬ್ಬರು ಟೈಲರ್‌ಗಳು 25 ವರ್ಷಗಳಿಂದ ಸ್ನೇಹಿತರಾದ ಇವರು ಪ್ರತೀ ದಿನವೂ ಇಬ್ಬರೂ ಒಂದೇ ರೀತಿಯ ಪ್ಯಾಂಟ್‌ -ಶರ್ಟ್‌ ಧರಿಸುತ್ತಾರೆ. 

ಅವರ ಹೆಸರೇ ರವೀಂದ್ರನ್‌ ಪಿಳ್ಳೆ ಮತ್ತು ಉದಯ ಕುಮಾರ್‌.  1982ರಲ್ಲಿ ಇಬ್ಬರ ನಡುವೆ ಪರಿಚಯವಾದ ಬಳಿಕ ಒಂದೇ ಸ್ಥಳದಲ್ಲಿ ತಮ್ಮ ಬಟ್ಟೆ ಹೊಲಿಯುವ ಅಂಗಡಿ ಸ್ಥಾಪಿಸಿದರು ಮತ್ತು ಮಿತ್ರತ್ವ ಗಾಢವಾಗಿ ಕಾಪಿಡುವ ಉದ್ದೇಶದಿಂದ ಪ್ರತೀ ದಿನವೂ ಇಬ್ಬರೂ ಒಂದೇ ಬಣ್ಣದ ಶರ್ಟ್‌- ಪ್ಯಾಂಟ್‌ ಧರಿಸಲು ಶುರು ಮಾಡಿದರು. 

ಮೂವತ್ತೂಂಬತ್ತು ವರ್ಷಗಳಿಂದ ಇಬ್ಬರೂ ಹಾಕುವ ಶರ್ಟ್‌, ಪ್ಯಾಂಟ್‌ ಒಂದೇ ಬಣ್ಣದ್ದು, ಒಂದೇ ಮೂಲ ವಸ್ತು ವನ್ನು ಹೊಂದಿರುತ್ತದೆ.  ತಮ್ಮ ಅಂಗಡಿಗೆ “ಪಿ.ಕೆ.ಟೈಲರ್ಸ್‌’ ಎಂಬ ಹೆಸರನ್ನೂ ಇರಿಸಿದ್ದಾರೆ. ಅವರಿಬ್ಬರ ಬಗ್ಗೆ ಜನರಿಂದ ಕೇಳಿ ತಿಳಿದಿದ್ದ ಕೇರಳದ ಜನಪ್ರಿಯ ವ್ಯಂಗ್ಯಚಿತ್ರ ಕಾರರಾಗಿದ್ದ ದಿ|ಪಿ.ಕೆ.ಮಂತ್ರಿ ಅವರು ಜೋಡಿ ಕಾರ್ಟೂನ್ ರಚಿಸಿದ್ದರು. “ಮನೋರಾಜ್ಯಂ’ ಎಂಬ ನಿಯತ ಕಾಲಿಕದಲ್ಲಿ ಅವರಿಬ್ಬರ ಜೋಡಿಯ ಕಾರ್ಟೂನ್ ಪ್ರಕಟವಾಗಿ ಮೆಚ್ಚುಗೆ ಗಳಿಸಿತ್ತು. ಪಿ ಎಂದರೆ ಪಚ್ಚು ಮತ್ತು ಕೋವಳಂ. ಇದು ಅವರಿಬ್ಬರ ಊರಿನ ಹೆಸರುಗಳು. ಹಬ್ಬಗಳ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರೂ ಮ್ಯಾಚಿಂಗ್‌ ಬಟ್ಟೆಯನ್ನೇ ಧರಿಸುತ್ತಾರಂತೆ. 

Ads on article

Advertise in articles 1

advertising articles 2

Advertise under the article