ಮುಂದಿನ ಸಿಎಂ ಯಾರು ಎಂದು ಹೇಳುವುದು ಯುವ ಕಾಂಗ್ರೆಸ್ ಕೆಲಸವಲ್ಲ- ಡಿಕೆಶಿ ನೆಕ್ಸ್ಟ್ ಸಿಎಂ ಎಂದ ನಳಪಾಡ್ ಗೆ ರಕ್ಷಾ ರಾಮಯ್ಯ ತಿರುಗೇಟು (Video)
Tuesday, July 13, 2021
ಮಂಗಳೂರು : ಮುಂದಿನ ಸಿಎಂ ಯಾರು ಎಂದು ಹೇಳುವುದು ಯುವ ಕಾಂಗ್ರೆಸ್ ಕೆಲಸವಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಹೇಳಿದರು.
ಡಿ ಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಮೊಹಮ್ಮದ್ ನಲಪಾಡ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರೀಯಿಸಿದ ಅವರು ನಳಪಾಡ್ ಬಾಯ್ತಪ್ಪಿ ಹೇಳಿರಬಹುದು. ಆದರೆ ಮುಂದಿನ ಸಿಎಂ ಯಾರು ಎಂದು ಹೇಳುವುದು ಯುವ ಕಾಂಗ್ರೆಸ್ ಕೆಲಸವಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಳಪಾಡ್ ಅವರು ಬಾಯ್ತಪ್ಪಿ ಹೇಳಿರಬಹುದು. ಯುವ ಕಾಂಗ್ರೆಸ್ನ ಕೆಲಸ ಪಕ್ಷವನ್ನು ಸಂಘಟಿಸುವುದು. ಯಾರು ಮುಂದಿನ ಮುಖ್ಯಮಂತ್ರಿ ಎಂಬುದನ್ನು ಯುವ ಕಾಂಗ್ರೆಸ್ನವರು, ಹಿರಿಯ ನಾಯಕರು ಹೇಳುವಂತಿಲ್ಲ. ನಲಪಾಡ್ ತಪ್ಪಿ ಹೇಳಿರಬೇಕು ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಒಂದು ತಿಂಗಳಿಗೆ ಕೊಟ್ಟರೂ, ಆರು ತಿಂಗಳಿಗೆ ಕೊಟ್ಟರೂ, ಒಂದು ವರ್ಷ ಕೊಟ್ಟರು ಮಾಡುತ್ತೇನೆ.ನನ್ನ ಮತ್ತು ನಲಪಾಡ್ ಮಧ್ಯೆ 12 ವರ್ಷದ ಸ್ನೇಹವಿದೆ. ಇನ್ನೂ ಇಪ್ಪತ್ತೈದು ವರ್ಷ ಈ ಸ್ನೇಹ ಮುಂದುವರಿಯುತ್ತದೆ. ಬಣಗಳು ಆಗಬಹುದು, ಯಾವುದೇ ಸಮಸ್ಯೆಗಳು ನಮ್ಮಲ್ಲಿಲ್ಲ ಎಂದರು.
ಯುವಕಾಂಗ್ರೆಸ್ ನಲ್ಲಿ ಅಧಿಕಾರ ಹಂಚುತ್ತಿರುವುದರಿಂದ ನಾನು ಅಧಿಕಾರ ಪಡೆದೆ, ನಲಪಾಡ್ ಕೂಡ ಪಡೆಯುತ್ತಾರೆ.ಇದರಿಂದಾಗಿ ಪ್ರತಿಯೊಬ್ಬರಿಗೂ ಅವಕಾಶ ಸಿಗುವಂತಾಗುತ್ತದೆ. ಮುಂದೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವರ್ಷಕ್ಕೊಬ್ಬರಂತೆ ಕೊಡುವ ಮೂಲಕ ಎಲ್ಲರಿಗೂ ಅವಕಾಶ ಸಿಗುವಂತೆ ಮಾಡುವಂತಾಗಬೇಕು ಎಂದು ಹೇಳಿದರು.