-->
ರಾತ್ರಿ ಪೋನ್ ಮಾಡಿ ಬಾ ಬಾ ಅಂತಿದ್ದ ಬಾಬಾ; ಬಿತ್ತು ಧರ್ಮದೇಟು! (Video)

ರಾತ್ರಿ ಪೋನ್ ಮಾಡಿ ಬಾ ಬಾ ಅಂತಿದ್ದ ಬಾಬಾ; ಬಿತ್ತು ಧರ್ಮದೇಟು! (Video)


ಗದಗ: ಡೋಂಗಿತನದ ಪವಾಡಗಳನ್ನು ಮಾಡಿ ಜನರಿಗೆ ನಂಬಿಸಿದ್ದ ನಕಲಿ ಬಾಬಾನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ನಡೆದಿದೆ. 



ಡೋಂಗಿ ಬಾಬಾ ಆಸೀಫ್ ಜಾಗಿರದಾರ ಎಂಬಾತನಿಗೆ ಜನ  ಥಳಿಸಿದ್ದಾರೆ. ಈತ ಮೂಲತಃ ಬಾಗಲಕೋಟೆ ಜಿಲ್ಲೆಯವನಾಗಿದ್ದಾನೆ. ಗದಗ ನಗರದ ಗಂಗಿಮಡಿಯಲ್ಲಿನ ತನ್ನ ಹೆಂಡತಿ ತವರು ಮನೆಯಲ್ಲಿಯೇ ವಾಸವಾಗಿದ್ದಾನೆ. 




ಕುದಿಯೋ ಎಣ್ಣೆ ಹಾಗೂ ಸುಡು ಸುಡು ತುಪ್ಪದಲ್ಲಿ ಕೈ ಹಾಕುತ್ತಿದ್ದ ಈ ಡೋಂಗಿ ಬಾಬಾ. ಏಕಾಏಕಿ ಮೈಮೇಲೆ ದೇವರ ಬಂದಂತೆ ನಟಿಸಿ ಜನರನ್ನ ನಂಬಿಸಿ ನಿಂಬೆಹಣ್ಣು, ಬೂದಿ ಕೊಟ್ಟು ಹಲವು ವರ್ಷಗಳಿಂದ ಡೋಂಗಿತನದ ಪವಾಡಗಳನ್ನು ಮಾಡಿ ಜನರಿಗೆ ನಂಬಿಸಿದ್ದ ಎನ್ನಲಾಗ್ತಿದೆ




ಡೋಂಗಿ ಬಾಬಾ ನಂಬಿ ಮೋಸ ಹೋದ ಜನರು  ರೊಚ್ಚಿಗೆದ್ದು, ಅವನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈತನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ನಾನು ಮಾಡಿದ್ದು ಮೋಸ, ತಪ್ಪಾಗಿದೆ ಕ್ಷಮಿಸಿ ಅಂತಾ ಬೇಡಿಕೊಂಡ್ರೂ ಧರ್ಮದೇಟು ಕೊಟ್ಟ ಜನರು ಗದಗ ಗ್ರಾಮೀಣ ಠಾಣೆಯ ಪೊಲೀಸರಿಗೆ ಆತನನ್ನ ಒಪ್ಪಿಸಿ ಜನರಿಗೆ ಮಂಕುಬೂದಿ ಎರಚಿ ಸಾವಿರಾರು ರೂ. ಹಣ ಲೂಟಿ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ. 

Ads on article

Advertise in articles 1

advertising articles 2

Advertise under the article