ಪ್ರಿಯಕರನನ್ನು ಮರಳಿ ಪಡೆಯಲು ವಶೀಕರಣದ ಮೊರೆಹೋದ ಯುವತಿ.. ಆದ್ರೆ ಆ ಮಾಂತ್ರಿಕ ಮಾಡಿದ್ದು ಕೇಳಿದ್ರೆ ನೀವು ಶಾಕ್ ಆಗ್ತೀರಾ!
Tuesday, July 13, 2021
ಮುಂಬೈ: ಪ್ರಿಯಕರ ತನ್ನನ್ನು ಬಿಟ್ಟು ಹೋಗಿದ್ದಾನೆ ಹಾಗಾಗಿ ಬಿಟ್ಟುಹೋದ ಮಾಜಿ ಪ್ರಿಯಕರನನ್ನು ಮರಳಿ ಪಡೆಯಲು ತಂತ್ರದ ಮೊರೆ ಹೋಗಿದ್ದ ಯುವತಿಗೆ ಮಾಂತ್ರಿಕನೊಬ್ಬ 4.57 ಲಕ್ಷ ರೂ ವಂಚಿಸಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಮೀರತ್ ಮೂಲದ ವಾಸಿಂ ಖಾನ್ ಎಂಬಾತ ಬಂಧಿತ ಮಾಂತ್ರಿಕ. ಖರ್ಗಾರ್‍ನ ನಿವಾಸಿಯಾಗಿರುವ 26 ವರ್ಷದ ಯುವತಿ, ಮಾಜಿ ಪ್ರಿಯಕರನನ್ನು ಮರಳಿ ಬರುವಂತೆ ಮಾಡಿಕೊಡುವಂತೆ ಮಾಂತ್ರಿಕನ ಮೊರೆ ಹೋಗಿದ್ದಳು. ಪ್ರಿಯಕರ ಬಂದೇ ಬರುತ್ತಾನೆ. ಅದಕ್ಕಾಗಿ ವಿಶೇಷ ಪೂಜೆ ಮಾಡಿಕೊಡುವೆ ಎಂದು ನಂಬಿಸಿ ಆಕೆಯಿಂದ ಕಂತುಗಳಲ್ಲಿ 4.57 ಲಕ್ಷ ರೂ.ಗಳನ್ನು ಪಡೆದಿದ್ದಾನೆ. ಆದರೆ ಪ್ರಿಯಕರನೂ ಬರಲಿಲ್ಲ. ಲಕ್ಷಾಂತರ ದುಡ್ಡು ವಾಪಸ್ಸಾಗಲಿಲ್ಲ.
ಕೊಟ್ಟ ದುಡ್ಡನ್ನು ವಾಪಸ್ ಕೊಡುವಂತೆ ಸಂತ್ರಸ್ತೆಗೆ ಕೇಳಿದಾಗ ಆಕೆ ಬೆದರಿಕೆಯೊಡ್ಡಿ ಪೊಲೀಸರಿಗೆ ದೂರು ಕೊಟ್ಟಲ್ಲಿ ರಸ್ತೆ ಅಪಘಾತದಲ್ಲಿ ಸಾಯುವಂತೆ ಮಾಟ ಮಾಡುವುದಾಗಿ ಹೆದರಿಸಿದ್ದ ಎಂದು ಪೊಲೀಸರಿಗೆ ವಿವರಿಸಿದ್ದಾಳೆ.