ಯೂಟ್ಯೂಬ್ ವೀಕ್ಷಿಸಿ ನಕಲಿ ನೋಟ್ ಪ್ರಿಂಟ್: ಆತ ಗಳಿಸಿದ ಹಣದ ಮೊತ್ತ ಕೇಳಿದರೆ ನೀವು ಶಾಕ್ ಆಗ್ತೀರಾ..!!
Saturday, July 3, 2021
ವಿಜಯವಾಡ: ಮನೆಯಲ್ಲೇ ಕುಳಿತು ಯೂಟ್ಯೂಬ್ ವೀಕ್ಷಿಸಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರಕರಣದ ಮುಖ್ಯ ಆರೋಪಿ. ಕೃಷ್ಣ ಯೂಟ್ಯೂಬ್ ವಿಡಿಯೋಗಳ ಮೂಲಕ ನಕಲಿ ನೋಟುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದಿದ್ದ. ಅದರಂತೆ ಮನೆಯಲ್ಲಿ ಕುಳಿತು ನಕಲಿ ಹಣ ಮುದ್ರಿಸುತ್ತಿದ್ದ. ಆತನ ಮನೆಯಲ್ಲಿ ಒಂದು ಪ್ರಿಂಟರ್, ಸ್ಕ್ಯಾನರ್ ಮತ್ತು ಕಟ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಕೃಷ್ಣ 200 ಮತ್ತು 500 ರೂ. ನೋಟುಗಳನ್ನು ಮುದ್ರಿಸುತ್ತಿದ್ದ. ಸ್ಟೇಷನರಿ ಶಾಪ್ನಲ್ಲಿ ಸಿಗುವ ಪೇಪರ್ನಿಂದಲೇ ಆರೋಪಿ ನೋಟು ಪ್ರಿಂಟ್ ಮಾಡುತ್ತಿದ್ದ. ಆರೋಪಿ ಎರಡು ಕೋಟಿ ರೂ. ಹಣವನ್ನು ಸಂಪಾಸಿದ್ದ ಎಂದು ತಿಳಿದುಬಂದಿದೆ. ಸದ್ಯ ಪ್ರಮುಖ ಆರೋಪಿ ಸೇರಿದಂತೆ ಇತರರ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಅವರನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.