ಪ್ರಿಯಕರನ ಜೊತೆ ಓಡಿ ಹೋದ ಮಾಜಿ ಕಾರ್ಪೊರೇಟರ್ ಪುತ್ರಿ.. ಕೊನೆಗೆ ಸಿಕ್ಕಿದ್ದು ಎಲ್ಲಿ ಗೊತ್ತಾ??
Saturday, July 3, 2021
ಹುಬ್ಬಳ್ಳಿ: ಪ್ರಿಯಕರನ ಜತೆ ಓಡಿಹೋಗಿದ್ದ ಹುಬ್ಬಳ್ಳಿಯ ಮಾಜಿ ಕಾರ್ಪೋರೇಟರ್ ಪುತ್ರಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೈರಾಣಾಗಿದ್ದ ಪೊಲೀಸರು ಕೊನೆಗೂ ಇಬ್ಬರನ್ನು ಹುಡುಕಿ ವಾಪಸ್ಸು ಕರೆತಂದಿದ್ದಾರೆ. ಪ್ರೇಮಿಗಳಿಗಾಗಿ ಪೊಲೀಸರು ಮೂರ್ನಾಲ್ಕು ಜಿಲ್ಲೆಗಳಲ್ಲಿ ತಲಾಶ್ ನಡೆಸಿದ್ದರು. ಕೊನೆಗೆ ಗದಗ ಜಿಲ್ಲೆಯಲ್ಲಿ ಪ್ರೇಮಿಗಳನ್ನು ಪತ್ತೆ ಹಚ್ಚಿದ್ದಾರೆ.
ಮಾಜಿ ಕಾರ್ಪೋರೇಟರ್ ರಾಜಣ್ಣ ಕೊರವಿ ಅವರ ಪುತ್ರಿ ಮೊನಾಲ್, ಪ್ರಿಯಕರ ರಾಹುಲ್ ಜತೆ ಓಡಿಹೋಗಿದ್ದಳು.
ಪ್ರೇಮಿಗಳಿಗಾಗಿ ಪೊಲೀಸರು ಮೂರ್ನಾಲ್ಕು ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೆ ಗದಗಿನಲ್ಲಿ ಪತ್ತೆಹಚ್ಚಿ ತಡರಾತ್ರಿ ಪ್ರೇಮಿಗಳನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಕರೆತಂದಿದ್ದಾರೆ. ಮೋನಾಲ್ ಹಾಗು ರಾಹುಲ್ ಪರಸ್ಪರ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಮಗಳ ಪ್ರೇಮಕ್ಕೆ ಮಾಜಿ ಕಾರ್ಪೋರೇಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.