
ಮೊಬೈಲ್ ಚಾರ್ಜ್ ಮಾಡೋಕೆ ಕೈ ಬೆರಳಿನಿಂದ ಬರುವ ಬೆವರು ಸಾಕಂತೆ...!!ಹೇಗೆ ಗೊತ್ತಾ?
Thursday, July 15, 2021
ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಬೆವರಿನಿಂದಲೂ ಕರೆಂಟ್ ಉತ್ಪಾದನೆ ಸಾಧ್ಯ ಎಂದು ಕಂಡುಹಿಡಿದಿದೆ.
ಬೆರಳ ತುದಿಗೆ ಕಂಡೆಕ್ಟರ್ ಗಳಿರುವ ಸಣ್ಣ ಡಿವೈಸ್ ಒಂದನ್ನು ಟೇಪ್ ಮಾಡಲಾಗುತ್ತದೆ. ಮೊದಲಿಗೆ ಈ ರೀತಿ ಬೆರಳಿಗೆ ಡಿವೈಸ್ ಹಾಕಿ ಅದನ್ನು ಸಣ್ಣದೊಂದು ಸೆನ್ಸಾರ್ ಗೆ ಹಾಗೂ ಸಣ್ಣ ಪವರ್ ನ ಸ್ಕ್ರೀನ್ ಗೆ ಕನೆಕ್ಟ್ ಮಾಡಲಾಗಿದೆ. ಈ ರೀತಿ ಕನೆಕ್ಟ್ ಮಾಡಿ ಎರಡು ನಿಮಿಷಗಳ ನಂತರ ಸೆನ್ಸಾರ್ ಮತ್ತು ಸ್ಕ್ರೀನ್ ಕೆಲಸ ಮಾಡಲು ಆರಂಭಿಸಿವೆ. ಸದ್ಯದ ಮಟ್ಟಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈಗ ತಯಾರಾಗುತ್ತಿರುವ ವಿದ್ಯುತ್ ನ ಪ್ರಮಾಣ ಎಷ್ಟಿದೆಯೆಂದರೆ ಮೂರು ವಾರಗಳ ಕಾಲ ಡಿವೈಸ್ ಬಳಕೆ ಮಾಡಿದರೆ ಅದರಲ್ಲಿ ಉಂಟಾಗುವ ಪವರ್ ಒಂದು ಮೊಬೈಲ್ ಚಾರ್ಜ್ ಮಾಡುವಷ್ಟಾಗುತ್ತದೆಯಂತೆ. ಈಗ ಪವರ್ ಕಡಿಮೆಯಿದ್ದರೂ ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ, ಮುಂಬರುವ ದಿನಗಳಲ್ಲಿ ಹೆಚ್ಚು ಪವರ್ ಉತ್ಪಾದನೆ ಆಗುವಂತೆ ಮಾಡಬಹುದು ಎಂದಿದ್ದಾರೆ ತಜ್ಞರು.