ನಟಿ ದಿಯಾ ಮಿರ್ಜಾಗೆ ಗಂಡು ಮಗು: ಬದುಕುಳಿದಿದ್ದೇ ಪವಾಡ ಎಂದು ನೋವು ಹಂಚಿಕೊಂಡ ನಟಿ..
Thursday, July 15, 2021
2014ರಲ್ಲಿ ಉದ್ಯಮಿ ಸಾಹುಲ್ ಸಂಘ ಅವರನ್ನು ಮದುವೆಯಾಗಿದ್ದರು. 2019ರಲ್ಲಿ ವಿಚ್ಛೇದನವಾಗಿತ್ತು. ನಂತರ ಕಳೆದ ಫೆಬ್ರುವರಿಯಲ್ಲಿ ವೈಭವ್ ಜತೆ ಮದುವೆಯಾಗಿದ್ದಾರೆ.
ಇದೀಗ ಮಗುವೊಂದರ ಕೈ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ‘ಇದು ನಮ್ಮ ಹೃದಯದ ಬಡಿತ.. ನಮ್ಮ ಪುತ್ರ ಅವ್ಯಾನ್ ಆಜಾದ್ ರೇಖಿ ಹುಟ್ಟಿದ್ದು ಮೇ 14ರಂದು. ಅವಧಿಗೂ ಮುನ್ನವೇ ಮಗು ಜನಿಸಿದೆ. ಅದನ್ನು ನಿಯೋನೇಟಲ್ ಐಸಿಯುನಲ್ಲಿ ನರ್ಸ್‍ಗಳು ಹಾಗೂ ವೈದ್ಯರು ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ತೀವ್ರ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆಗಿದ್ದರಿಂದ ಮಗುವಿನ ಜೀವಕ್ಕೆ ಅಪಾಯವಿತ್ತು. ಆದ್ದರಿಂದ ಕೂಡಲೇ ಎಮರ್ಜೆನ್ಸಿ ಸಿ-ಸೆಕ್ಷನ್ ಮುಖಾಂತರ ನನಗೆ ಹೆರಿಗೆ ಮಾಡಲಾಯಿತು. ಮಗು ಬದುಕುಳಿದಿರುವುದೇ ಪವಾಡ ಎಂದು ತಿಳಿಸಿದ್ದಾರೆ.