ಪ್ರೀತಿಸಿ ವಂಚಿಸುತ್ತಿದ್ದ ಖತರ್ನಾಕ್ ಸುಂದರಿ...ಆಧಾರ್ ಕಾರ್ಡ್ ನೋಡಿದ ಗಂಡನಿಗೆ ಶಾಕ್..!!
Thursday, July 15, 2021
ಚಿತ್ತೂರು: ಅನಾಥ ಯುವಕರನ್ನು ಗುರಿಯಾಗಿರಿಸಿ ಅವರನ್ನು ಪ್ರೀತಿಯ ಬಲೆಗೆ ಬೀಳಿಸಿ ಮದುವೆಯಾಗಿ ಹಣ ಪೀಕಿ ವಂಚಿಸುತ್ತಿದ್ದವಳು ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾಳೆ. ಈ ಘಟನೆ ಚಿತ್ತೂರಿನ ಅಲಿಪಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುನೀಲ್ ಕುಮಾರ್ (29) ಎಂಬಾತ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಎಬಿಡಿ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಸುಹಾಸಿನಿ ಎಂಬಾಕೆಯ ಪರಿಚಯ ಆಗುತ್ತದೆ. ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗುತ್ತದೆ. ಹಿರಿಯರ ಸಮ್ಮುಖದಲ್ಲಿ ಇಬ್ಬರು ಕಳೆದ ಡಿಸೆಂಬರ್ನಲ್ಲಿ ಮದುವೆಯು ಆಗುತ್ತಾರೆ. ಮದುವೆ ವೇಳೆ ಸುಹಾಸಿನಿಗೆ ಸುನೀಲ್ ಮನೆಯವರು 20 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡುತ್ತಾರೆ. ಇದಾದ ಬಳಿಕ ಸುಳ್ಳೊಂದನ್ನು ಹೇಳಿ ಸುನೀಲ್ನಿಂದ 2 ಲಕ್ಷ ರೂ. ಪಡೆದುಕೊಳ್ಳುತ್ತಾಳೆ. ಅಲ್ಲದೆ, ಸುನೀಲ್ ಸಂಬಂಧಿಕರ ಬಳಿಯೂ ಸುಹಾಸಿನಿ ಹಣವನ್ನು ಪಡೆದುಕೊಂಡಿರುತ್ತಾಳೆ. ಇದು ಸುನೀಲ್ಗೆ ಗೊತ್ತಾಗುತ್ತದೆ. ಸುನೀಲ್ ಮತ್ತು ಸುಹಾಸಿನಿ ನಡುವೆ ಜಗಳ ನಡೆಯುತ್ತದೆ. ಕಳೆದ ತಿಂಗಳು 8ನೇ ತಾರೀಖಿನಂದು ಸುಹಾಸಿನಿ ಯಾರಿಗೂ ಹೇಳದೇ ಮನೆಯನ್ನು ಬಿಟ್ಟು ಹೋಗುತ್ತಾಳೆ. ಬಳಿಕ ಸುನೀಲ್ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸುತ್ತಾನೆ. ಸುನೀಲ್ಗೆ ಆಕೆಯ ಆಧಾರ್ ಕಾರ್ಡ್ ಪತ್ತೆಯಾಗುತ್ತದೆ. ಈ ವೇಳೆ ಆಕೆ ಮೊದಲೇ ನೆಲ್ಲೂರ್ ಜಿಲ್ಲೆಯ ವೆಂಕಟೇಶ್ವರಲು ಎಂಬಾತನ ಜತೆ ಮದುಗೆ ಆಗಿ ಎರಡು ಮಕ್ಕಳಿರುವುದು ತಿಳಿಯುತ್ತದೆ.
ಇನ್ನೊಂದೆಡೆ ಎರಡು ವರ್ಷಗಳ ಹಿಂದೆ ಕೊಟ್ಟಗುಡೆಮ್ ಮೂಲದ ವಿನಯ್ ಎಂಬಾತನ ಜತೆಯಲ್ಲೂ ಸುಹಾಸಿನಿಗೆ ಮದುವೆ ಆಗಿದೆ ಎಂಬ ವಿಚಾರವು ಬಯಲಿಗೆ ಬರುತ್ತದೆ. ಈ ವಿಚಾರ ತಿಳಿದ ಬೆನ್ನಲ್ಲೇ ಸುನೀಲ್, ಅಲಿಪಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾನೆ. ತನಿಖೆ ಆರಂಭಿಸುವ ಪೊಲೀಸರಿಗೆ ಸುಹಾಸಿನಿ ತಿರುಪತಿಯ ವಿವೇಕಾನಂದ ವೃತ್ತದ ಬಳಿ ಸಿಕ್ಕಿ ಬೀಳುತ್ತಾಳೆ. ಆಕೆಯನ್ನು ಮಂಗಳವಾರ ಬಂಧಿಸಲಾಗಿದೆ. ಅಂದಹಾಗೆ ವಿನಯ್, ಸುಹಾಸಿನಿಗೆ ಎರಡನೇ ಗಂಡ. ಎರಡು ವರ್ಷಗಳ ಹಿಂದೆ ಇದೇ ರೀತಿಯಾಗಿ ಸುಹಾಸಿನಿ ಇಂದ ನಾನು ಮೋಸ ಹೋದೆ ಎಂದು ವಿನಯ್ ವಿಡಿಯೋ ಮೂಲಕ ಹೇಳಿಕೊಂಡಿದ್ದಾನೆ. ಬಳಿಕ ವಿನಯ್ ಪ್ರಕರಣವನ್ನು ದಾಖಲಿಸಲು ಹೋದಾಗ ದೂರು ತೆಗೆದುಕೊಳ್ಳಲಿಲ್ಲ ಎಂದು ಪೊಲೀಸರನ್ನು ದೂರಿದ್ದಾರೆ. ಇದರಿಂದ ವಿನಯ್ ಸುಮ್ಮನಾಗಿದ್ದ ಇದೀಗ ಅಲಿಪಿರಿ ಪೊಲೀಸರು ಆಕೆಯನ್ನು ಬಂಧಿಸಿದ್ದು ಅದರ ಬೆನ್ನೆಲ್ಲೇ ವಿನಯ್ ತನಾಗದ ಮೋಸವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಬಂಧಿತ ಸುಹಾಸಿನಿ ಅನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗಿದೆ.