
MANGALORE: ಮನೆಯಲ್ಲಿ ಒಬ್ಬನೆ ಇದ್ದೇನೆ, ಬರ್ತಿಯ ಎಂದು ಅಪ್ರಾಪ್ತ ಬಾಲಕಿಗೆ ಮೆಸೆಜ್ ಮಾಡಿದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅರೆಸ್ಟ್! ಈತನಿಗೆ ಬಾಲಕಿ ನಂಬರ್ ಸಿಕ್ಕಿದ್ದು ಹೀಗೆ…
ಮಂಗಳೂರು: ಮನೆಯಲ್ಲಿ ಒಬ್ಬನೆ ಇದ್ದೇನೆ. ಬರ್ತಿಯಾ.. ಹೀಗಂತ ಅಪ್ರಾಪ್ತ
ಬಾಲಕಿಗೆ ಮೆಸೆಜ್ ಮಾಡಿ ಕಿರುಕುಳ ನೀಡಿದ್ದ ಮಂಗಳೂರಿನ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ನನ್ನು ಮಹಿಳಾ
ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಗೆ ಜನವರಿ ತಿಂಗಳಲ್ಲಿ ರಕ್ಷಾ ಚಾಲಕನೊಬ್ಬ ಲೈಂಗಿಕ
ಕಿರುಕುಳ ನೀಡುತ್ತಿರುವ ಬಗ್ಗೆ ದೂರು ದಾಖಲಾಗಿತ್ತು.
ಈ ದೂರು ನೀಡಲು ಈ ಬಾಲಕಿ ಪೊಲೀಸ್ ಠಾಣೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ಈ ಪೊಲೀಸ್ ಹೆಡ್ ಕಾನ್ಸ್
ಟೇಬಲ್ ಬಾಲಕಿಯ ಮೊಬೈಲ್ ನಂಬರನ್ನು ಪಡೆದಿದ್ದ. ಬಳಿಕ ಆಕೆಗೆ ಮೆಸೆಜ್ ಮಾಡುವುದು , ಚಾಟ್ ಮಾಡುವುದನ್ನು
ಮುಂದುವರಿಸಿದ್ದಾನೆ. ಬಾಲಕಿಗೆ ಮೆಸೆಜ್ ಮಾಡಿ ಎಲ್ಲಿ
ಇದ್ದೀಯ, ಮನೆಯಲ್ಲಿ ಒಬ್ಬನೆ ಇದ್ದೇನೆ, ಬರ್ತಿಯ ಮೊದಲಾದ ಮೆಸೆಜ್ ಗಳನ್ನು ಹಾಕಿ ಅನುಚಿತವಾಗಿ ವರ್ತಿಸಿದ್ದ.
ಈ ವಿಚಾರವನ್ನು ಅಪ್ರಾಪ್ತ ಬಾಲಕಿ ಹೆತ್ತವರ ಗಮನಕ್ಕೆ ತಂದಿದ್ದು, ಹೆತ್ತವರು
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರ ಗಮನಕ್ಕೆ ತಂದಿದ್ದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಪೊಲೀಸ್
ಅಧಿಕಾರಿಗಳನ್ನು ಭೇಟಿಯಾಗಿ ಈ ವಿಚಾರ ಗಮನಕ್ಕೆ ತಂದಿದ್ದು ತಕ್ಷಣ ಪ್ರಕರಣ ದಾಖಲಿಸಿಕೊಂಡ ಮಹಿಳಾ ಪೊಲೀಸರು ಆರೋಪಿ ಪೊಲೀಸ್ ಕಾನ್ಸ್ಟೇಬಲ್ ನನ್ನು ಬಂಧಿಸಿದ್ದಾರೆ