ಇದು ಅಪ್ರಾಪ್ತೆಯೊಬ್ಬಳ ಪ್ರೇಮ ಕಥೆ- ರೇಪ್ ಕೇಸ್ ನಲ್ಲಿ ಜೈಲಿನೊಳಗಿದ್ದ ಪ್ರೇಮಿಗಾಗಿ ಈಕೆ ಮಾಡಿದ್ದೇನು ಗೊತ್ತಾ?
Wednesday, July 28, 2021
ಅಲಿಗಢ: 15 ವರ್ಷದ ಖುಷಿಗೆ ವರುಣ್ ಎಂಬಾತನ ಜತೆ ಪ್ರೀತಿಯಾಗಿತ್ತು. ಆದರೆ ಇನ್ನೂ ಅಪ್ರಾಪ್ತೆಯಾಗಿರುವ ಕಾರಣ, ಯಾರೂ ಈ ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದಿತ್ತು. ಇದೇ ಕಾರಣಕ್ಕೆ ಖುಷಿ ಮತ್ತು ವರುಣ್ ಮನೆ ಬಿಟ್ಟು ಪರಾರಿಯಾಗಿದ್ದರು. ಆದರೆ, ಪೊಲೀಸ್ ಕಂಪ್ಲೇಂಟ್ ನೀಡಿರುವ ಖುಷಿಯ ಪಾಲಕರು ಇವರನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದರು.
ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ತಿಳಿದಿದ್ದರೂ ವರುಣ್ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಕೇಸ್ ದಾಖಲು ಮಾಡಿದರು. ವರುಣ್‌ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದರು. ಇನ್ನೂ 15 ವರ್ಷ ತನಗೆ. ಅಪ್ರಾಪ್ತೆಯಾಗಿರುವ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಅರಿತ ಖುಷಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಖುಷಿ ಅಪ್ಪ- ಅಮ್ಮ ಹೇಳಿದಂತೆಯೇ ಕೇಳುವುದಾಗಿ ಹೇಳಿದಳು.
ಖುಷಿಗೆ 18 ವರ್ಷ ತುಂಬುತ್ತಿದ್ದಂತೆ ಆಕೆ ಕೂಡಲೇ ಮಹಿಳಾ ಆಯೋಗದ ಸಹಾಯದಿಂದ ಕೋರ್ಟ್ ಬಾಗಿಲು ತಟ್ಟಿದಳು. ತನ್ನೆಲ್ಲಾ ಕಥೆಯನ್ನು ಹೇಳಿದ ಆಕೆ ಪ್ರೇಮಿ ಬಿಡುಗಡೆ ಮಾಡುವಂತೆ ಮನವಿ ಮಾಡಿದಳು. ಯುವತಿಯ ಮಾತನ್ನು ಕೇಳಿದ ಕೋರ್ಟ್ ಕೂಡ ಈಕೆಯ ಪ್ರೇಮಕ್ಕೆ ತಲೆಬಾಗಿತು. ಆಕೆಯ ಪರವಾಗಿ ತೀರ್ಪು ನೀಡಿತು. ವರುಣನಿಗೆ ಬಿಡುಗಡೆಯಾಯಿತು. ನಂತರ ಖುಷಿ ಮತ್ತು ವರುಣ್ ಕುಟುಂಬದ ಸದಸ್ಯರ ವಿರೋಧದ ನಡುವೆಯೂ ಸಮೀಪವಿರುವ ಶ್ರೀ ವರ್ಷನಿ ದೇವಸ್ಥಾನಕ್ಕೆ ತೆರಳಿ ಹಿಂದೂ ಪದ್ಧತಿಗಳ ಪ್ರಕಾರ ಮದುವೆಯಾಗಿದ್ದಾರೆ.