MANGALORE: ಮಂಗಳೂರಿನಲ್ಲಿ ಪಾರ್ಟಿ ನೆಪದಲ್ಲಿ ಯುವಕನನ್ನು ಬೆತ್ತಲೆಗೊಳಿಸಿದ ಅಝ್ವೀನ್ ಮತ್ತು ಸಪ್ನಾ … ಮುಂದೇನಾಯಿತೆಂದರೆ…
ಮಂಗಳೂರು: ನೆರೆಮನೆಯ
ಯುವಕನ ಮನೆಗೆ ಹೋಗಿ ಆತನ ಜೊತೆಗೆ ಪಾರ್ಟಿ ಮಾಡಿದ ಜೋಡಿಯೊಂದು ಆತನಿಗೆ ಅಮಲು ಪದಾರ್ಥ ನೀಡಿ ಆತನನ್ನು
ಬೆತ್ತಲೆಗೊಳಿಸಿ ಹನಿಟ್ರ್ಯಾಪ್ ಮಾಡಿದ ಘಟನೆ ನಡೆದಿದ್ದು ಈ ಕಿಲಾಡಿ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಝ್ವೀನ್ ಮತ್ತುಹತೀಜಮ್ಮಾ ಯಾನೆ ಸಪ್ನಾ ಎಂಬ ಜೋಡಿ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ
ವ್ಯಾಪ್ತಿಯ ಪ್ಲ್ಯಾಟ್ ವೊಂದರಲ್ಲಿ ವಾಸವಾಗಿದ್ದಾರೆ. ಮದುವೆಯಾಗದ ಈ ಜೋಡಿ ಹನಿಟ್ರ್ಯಾಪ್ ಮಾಡಲೆಂದೆ
ಪ್ಲ್ಯಾನ್ ಮಾಡಿ ಈ ಮನೆಯಲ್ಲಿ ವಾಸವಾಗಿದೆ. ಇವರ ಪಕ್ಕದ ಮನೆಯ ವ್ಯಕ್ತಿಯನ್ನು ಹನಿಟ್ರ್ಯಾಪ್ ಬಲೆಗೆ
ಬೀಳಿಸಿ ದುಡ್ಡು ಮಾಡಲು ಹೋಗಿ ಈ ಜೋಡಿ ಇದೀಗ ಜೈಲುಪಾಲಾಗಿದೆ.
ಅಝ್ವೀನ್ (24),ಹತೀಜಮ್ಮಾ ಯಾನೆ ಸಪ್ನಾ(23) ಎಂಬ ಈ ಜೋಡಿ ಪಕ್ಕದ ಮನೆಯ ಯುವಕನ ಮನೆಗೆ
ಬಂದು ಪಾರ್ಟಿ ಮಾಡುವ ಎಂದು ತಿಳಿಸಿದ್ದಾರೆ. ಪರಿಚಯದ ವ್ಯಕ್ತಿಗಳಾಗಿರುವುದರಿಂದ ಇವರ ಪಾರ್ಟಿ ಆಫರ್
ಗೆ ಒಪ್ಪಿದ ಯುವಕ ತಮ್ಮ ಮನೆಯಲ್ಲಿಯೆ ಮದ್ಯ ಪಾರ್ಟಿಯನ್ನು ಆಯೋಜಿಸಿ್ದ್ದಾರೆ. ಪಾರ್ಟಿಯ ಮಧ್ಯೆ ಜ್ಯೂಸ್
ಗೆ ಈ ಜೋಡಿ ಅಮಲು ಪದಾರ್ಥ ಸೇವಿಸಿ ಈ ಜೋಡಿಗೆ ನೀಡಿದೆ. ಅವರು ನೀಡಿದ ಅಮಲು ಪದಾರ್ಥ ಸೇವಿಸಿ ಯುವಕನಿಗೆ ಪ್ರಜ್ಞೆ
ತಪ್ಪಿದೆ. ಎಚ್ಚರವಾದಾಗ ಈತ ಬೆತ್ತಲೆಯಾಗಿದ್ದು ಕೈಯಲ್ಲಿದ್ದ್
ನವರತ್ನದ ರಿಂಗ್ ಮತ್ತು ಕಪಾಟಿನಲ್ಲಿದ್ದ 2 ಲಕ್ಷ 15 ಸಾವಿರ ರೂಪಾಯಿ ಕಾಣೆಯಾಗಿದೆ.
ಇವರ ಕುಕೃತ್ಯ ಅರಿವಿಗೆ ಬಂದ ಯುವಕ ಮರುದಿನ ಬೆಳಿಗ್ಗೆ ಅವರ ಮನೆಗೆ
ಹೋಗಿ ಹಣ ವಾಪಾಸು ನಿಡುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪದ್ದಿದ್ದಾಗ ಪೊಲೀಸರಿಗೆ ದೂರು ನೀಡುವುದಾಗಿ
ತಿಳಿಸಿದ್ದಾನೆ. ಆಗ ನಾಳೆ ಹಣ ನೀಡುವೆ , ದೂರು ನೀಡುವುದು
ಬೇಡ ಎಂದು ಈ ಜೋಡಿ ಆತನನ್ನು ವಾಪಾಸು ಕಳುಹಿಸಿದೆ. ಬಳಿಕ ಈ ಜೋಡಿ ಯುವಕನ ಮನೆಗೆ ಬಂದು ತಮ್ಮ ಮೊಬೈಲ್
ನಲ್ಲಿದ್ದ ಯುವಕನ ನಗ್ನ ಪೊಟೋಗಳನ್ನು, ವಿಡಿಯೋಗಳನ್ನು ತೋರಿಸಿ ಹಣ ಕೇಳಿದರೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ
ಹಾಕುವ ಬೆದರಿಕೆ ಮತ್ತು ಯುವತಿಯ ಅತ್ಯಾಚಾರ ಯತ್ನ ದೂರು ದಾಖಲಿಸುವ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ
ಯುವಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಅಝ್ವೀನ್ ಮತ್ತು ಸಪ್ನಾ ಜೋಡಿಯನ್ನು
ಬಂಧಿಸಿದ್ದಾರೆ.