
ಅಪ್ರಾಪ್ತ ಮಲ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ..!! ಕಾಮುಕ ತಂದೆಯ ಬಂಧನ..
Wednesday, July 28, 2021
ರಾಜಸ್ತಾನ: ಅಪ್ರಾಪ್ತ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಯನ್ನು ರಾಜಸ್ತಾನದ ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ.
ಈ ಪಾಪಿ ತಂದೆ ಒಬ್ಬಳು ಮಲ ಮಗಳ ಮೇಲೆ ಅತ್ಯಾಚಾರ ನಡೆಸಿ ಮತ್ತೋರ್ವ ಮಲ ಮಗಳ ಮೇಲೆ ಕಣ್ಣು ಹಾಕಿದ್ದ.ಬಾಲಕಿಯರ ತಾಯಿ, ಆರೋಪಿ ಜೊತೆ ಮೂರು ವರ್ಷಗಳ ಹಿಂದೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಆರೋಪಿ ತಂದೆ, ಮಲ ಮಕ್ಕಳ ಮೇಲೆ ಎಸಗುತ್ತಿರುವ ಕಿರುಕುಳ ನೋಡಿದ ತಾಯಿ ತನ್ನ ಸಂಬಂಧಿಕರ ಮನೆಗೆ ಕಳಿಸುತ್ತಾರೆ. ನಂತರ ಅವರನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಸೇರಿಸುತ್ತಾರೆ.
ಅಲ್ಲಿನ ಸಿಬ್ಬಂದಿಗೆ ತಮಗಾದ ಕಿರುಕುಳದ ಬಗ್ಗೆ ಮಕ್ಕಳು ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಾಂತ್ವಾನ ಕೇಂದ್ರದ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.