ಮೊದಲ ಮದುವೆ ಮುಚ್ಚಿಟ್ಟು ವಿವಾಹೇತರ ಸಂಬಂಧ ಹೊಂದಿದ್ದ ಅಮಾನತು ಎಸ್ ಐ ಅಮಾನತು...
Sunday, July 25, 2021
ಟಾಪ್ಪಚಬುತ್ರ ಪೊಲೀಸ್ ಠಾಣೆಯ ಎಸ್ಐ ಮಧು ಎಂಬುವರನ್ನು ಅಮಾನತು ಮಾಡಲಾಗಿದೆ. ಮೊದಲ ಮದುವೆಯನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ಮತ್ತೊಂದು ಯುವತಿಯನ್ನು ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡು ಇದೀಗ ವಂಚಿಸಿರುವ ಆರೋಪದ ಅಡಿ ಯುವತಿ ಎಸ್ಐ ಮಧು ವಿರುದ್ಧ ದೂರು ನೀಡಿದ್ದಾಳೆ.
ಮದುವೆಯಾಗುವುದಾಗಿ ನನ್ನನ್ನು ನಂಬಿಸಿ, ವಿವಾಹೇತರ ಸಂಬಂಧವನ್ನು ಬೆಳೆಸಿದ್ದಾರೆ. ಇದೀಗ ಮದುವೆ ಆಗು ಅಂದರೆ ತಿರಸ್ಕರಿಸುತ್ತಿದ್ದಾರೆ. ಅಲ್ಲದೆ, ಮೊದಲೇ ಮದುವೆ ಆಗಿರುವುದನ್ನು ಮುಚ್ಚಿಟ್ಟು ವಂಚನೆ ಮಾಡಿದ್ದಾರೆಂದು ಸಂತ್ರಸ್ತ ಯುವತಿ ಬೆಗುಂಪೇಟೆ ಹಾಗೂ ಟಾಪ್ಪಚಬುತ್ರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾಳೆ. ಯುವತಿ ದೂರಿದ್ದಾಳೆ. ಸದ್ಯ ಎಸ್ಐ ಮಧುರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.