ಜಿಯೊದಲ್ಲಿ ಡಾಟಾ ಸಾಲ ಲಭ್ಯವೇ? ಎಷ್ಟು ಜಿಬಿ ಡಾಟಾ ಸಾಲ ಪಡೆಯಬಹುದು? ಇಲ್ಲಿದೆ ಮಾಹಿತಿ...
Sunday, July 25, 2021
ಮಂಗಳೂರು: ಇನ್ನು ಮುಂದೆ ಯಾರದ್ದಾರೂ ಮೊಬೈಲಿನಲ್ಲಿ ಡೇಟಾ ಖಾಲಿಯಾಅಗಿ, ಅನಿವಾರ್ಯವಾಗಿ ರಿಚಾರ್ಜ್ ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಅವರು ರಿಲಯನ್ಸ್ ಜಿಯೊ ಗ್ರಾಹಕರಾಗಿದ್ದರೆ ಚಿಂತೆ ಮಾಡುವ ಅಗತ್ಯವೇಇಲ್ಲ. ಜಿಯೊ ಕಂಪನಿಯು ಈಗ ತನ್ನ ಗ್ರಾಹಕರಿಗಾಗಿ ‘ಡೇಟಾ ಲೋನ್’ ಅಥವಾ ‘ಡೇಟಾ ಸಾಲ’ ಯೋಜನೆಯೊಂದನ್ನು ಪರಿಚಯಿಸಿದೆ. ಅಗತ್ಯವಿರುವಾಗ ಸಾಲದ ರೂಪದಲ್ಲಿ ಡೇಟಾ ಪಡೆದು ನಂತರ ಅದಕ್ಕಾಗಿ ಹಣ ಪಾವತಿ ಮಾಡುವ ಸೌಲಭ್ಯ ಇದಾಗಿದೆ.
ಗ್ರಾಹಕರು ಪ್ರತೀ ಬಾರಿ 1 ಜಿಬಿಯಂತೆ ಒಟ್ಟಾರೆ 5 ಜಿಬಿವರೆಗೆ ಗ್ರಾಹಕರು ಡೇಟಾ ಸಾಲ ಪಡೆಯಬಹುದು. ಪ್ರತಿ ಜಿಬಿ ಡೇಟಾಗೆ 11 ರೂ.ಗೆ ಚಾರ್ಜ್ ಮಾಡಲಾಗುತ್ತಿದ್ದು, ಹೀಗೆ ಪಡೆಯಲಾದ ಡೇಟಾ ವ್ಯಾಲಿಡಿಟಿಯು ಆಯಾ ಸಮಯದಲ್ಲಿ ರಿಚಾರ್ಜ್ ಮಾಡಲಾದ ಬೇಸ್ ಪ್ಲ್ಯಾನ್ ವ್ಯಾಲಿಡಿಟಿಯಷ್ಟೇ ಇರುತ್ತದೆ. ಅಂದರೆ ಬೇಸ್ ಪ್ಲ್ಯಾನ್ ವ್ಯಾಲಿಡಿಟಿ ಇರುವವರೆಗೂ ಹೀಗೆ ಲೋನ್ ಪಡೆದ ಡೇಟಾ ಬಳಸಬಹುದು. ಸಕ್ರಿಯ ಬೇಸ್ ಪ್ಲ್ಯಾನ್ ಜಾರಿಯಲ್ಲಿದ್ದರೆ ಮಾತ್ರ ಹೀಗೆ ಡೇಟಾ ಲೋನ್ ಪಡೆಯಲು ಸಾಧ್ಯ ಎಂಬುದು ಗಮನದಲ್ಲಿರಲಿ.
ಜಿಯೊ ಬಳಕೆದಾರರು ಡೇಟಾ ಸಾಲ ಪಡೆಯಬೇಕಾದಲ್ಲಿ ತಮ್ಮ ಮೊಬೈಲ್ ನಲ್ಲಿ ಮೊದಲಾಗಿ ಮೈ ಜಿಯೊ ಆ್ಯಪ್ ಇನಸ್ಟಾಲ್ ಮಾಡಕೊಂಡಿರುವುದು ಅತ್ಯವಶ್ಯ.
ಮೈ ಜಿಯೊ ಆ್ಯಪ್ ಓಪನ್ ಮಾಡಿಕೊಂಡು ಎಡ ಮೇಲ್ಭಾಗದ ತುದಿಯಲ್ಲಿರುವ ಹ್ಯಾಂಬರ್ಗರ್ ಮೆನು ಕ್ಲಿಕ್ ಮಾಡಿ. ಅಲ್ಲಿ ಮೊಬೈಲ್ ಆಯ್ಕೆ ಮಾಡಿದ ಬಳಿಕ ಎಮರ್ಜೆನ್ಸಿ ಡಾಟ ಲೋನ್ ಕ್ಲಿಕ್ ಮಾಡಿ. ಆಗ ಕಾಣಿಸುವ ಎಮರ್ಜೆನ್ಸಿ ಡೇಟಾ ಲೋನ್ ಬ್ಯಾನರ್ ನಡಿಯಲ್ಲಿ ಪ್ರೊಸೀಡ್ ಎಂಬುದನ್ನು ಕ್ಲಿಕ್ ಮಾಡಿ. ಗೆಟ್ ಎಮರ್ಜೆನ್ಸಿ ಡಾಟಾ ಆಪ್ಷನ್ ಆಯ್ಕೆ ಮಾಡಿ. ಈಗ ಆ್ಯಕ್ಟಿವ್ ನವ್ ಎಂದು ಕ್ಲಿಕ್ ಮಾಡಿ. ಸ್ಪ್ಯಾಮ್ ಮೆಸೇಜುಗಳನ್ನು ಬ್ಲಾಕ್ ಹಾಗೂ ರಿಪೋರ್ಟ್ ಮಾಡುವುದು ಹೇಗೆ?
ಇಷ್ಟು ಮಾಡಿದ ನಂತರ ಈಗ ನಿಮ್ಮ ಕನೆಕ್ಷನ್ ಮೇಲೆ ಡೇಟಾ ಲೋನ್ ಸಕ್ರಿಯವಾಗಿರುತ್ತದೆ. ಇನ್ನು ಇದೇ ಎಮರ್ಜೆನ್ಸಿ ಡೇಟಾ ಲೋನ್ ಪೇಜಿನಲ್ಲಿ ನೀವು ಪಡೆದ ಡೇಟಾ ಲೋನ್ ಗಾಗಿ ಪೇಮೆಂಟ್ ಸಹ ಮಾಡಬಹುದು. ಡೇಟಾ ಸಾಲ ಪಡೆದ ಬಳಿಕ ಎಷ್ಟು ದಿನಗಳ ಒಳಗೆ ಅದರ ಶುಲ್ಕವನ್ನು ಮರುಪಾವತಿಸಬೇಕು ಎಂಬುದನ್ನು ಜಿಯೊ ಈವರೆಗೂ ಬಹಿರಂಗ ಪಡಿಸಿಲ್ಲ. ಕಂಪನಿ ಇದನ್ನು ಯಾವಾಗ ಹೇಳುತ್ತದೋ ನೋಡೋಣ.. ಅಲ್ಲಿಯವರೆಗೆ ನೀವು ಕೂಡ ಅಗತ್ಯವಿದ್ದರೆ ಡೇಟಾ ಲೋನ್ ಸೌಲಭ್ಯ ಪಡೆದುಕೊಳ್ಳಿ ಹಾಗೂ ನಿಮ್ಮ ಕೆಲಸ ಮುಂದುವರೆಸಿ.
ಕಳೆದ ವಾರ ಜಿಯೊ 3,499 ರೂ.ಗಳ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರತಿದಿನ ಬಳಕೆದಾರರಿಗೆ 3 ಜಿಬಿ ಡೇಟಾ ಸಿಗಲಿದೆ. ಜಿಯೊ ಈಗಾಗಲೇ 5ಜಿ ನೆಟವರ್ಕ್ ಪರೀಕ್ಷೆ ನಡೆಸುತ್ತಿದ್ದು, ಇದು ಆರಂಭವಾದರೆ ಗ್ರಾಹಕರಿಗೆ 1 ಜಿಬಿಪಿಎಸ್ ವೇಗದಲ್ಲಿ ಡೇಟಾ ಸಂಪರ್ಕ ದೊರಕಲಿದೆ.