-->

ಬಂಗೀ ಜಂಪಿಂಗ್​ ವೇಳೆ ಬಾಯ್​ಫ್ರೆಂಡ್​  ನೀಡಿದ ರಾಂಗ್ ಸಿಗ್ನಲ್ ನಿಂದಾಗಿ ಯುವತಿ ಸಾವು..!!

ಬಂಗೀ ಜಂಪಿಂಗ್​ ವೇಳೆ ಬಾಯ್​ಫ್ರೆಂಡ್​ ನೀಡಿದ ರಾಂಗ್ ಸಿಗ್ನಲ್ ನಿಂದಾಗಿ ಯುವತಿ ಸಾವು..!!

 

ಬೊಗತಾ: ಬಂಗೀ ಜಂಪಿಂಗ್​ ವೇಳೆ ರೋಪ್​ ಅಳವಡಿಸುವುದಕ್ಕೂ ಮುನ್ನ ತಪ್ಪಾದ ಸಿಗ್ನಲ್​ನಿಂದಾಗಿ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಕೊಲಂಬಿಯಾದಲ್ಲಿ ನಡೆದಿದೆ. 

ಯೆಸಿನಿಯಾ ಮೊರಾಲೆಸ್​ (25) ಮೃತ ದುರ್ದೈವಿ. ಉತ್ತರ ಕೊಲಂಬಿಯಾದಲ್ಲಿರುವ 40 ಮೀಟರ್​ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾಳೆ. ಬಾಯ್​ಫ್ರೆಂಡ್​ ನೀಡಿದ “ಗೋ” ಸಿಗ್ನಲ್​ನಿಂದ ಬಂಗೀ ಜಿಗಿತ ಮಾಡಿದ ಯುವತಿ ಸಾವನ್ನಪ್ಪಿದ್ದಾಳೆ.  

ಬಂಗೀ ಜಂಪಿಂಗ್​ ವೇಳೆ ತಮ್ಮ ಸರದಿ ಬಂದಾಗ ಮೊದಲು ಯೆಸಿನಿಯಾ ತೆರಳಿದಳು. ಅವಳ ಹಿಂದೆಯೇ ಬಾಯ್​ಫ್ರೆಂಡ್​ ಇದ್ದ. ಬಂಗೀ ರೋಪ್​ ಅನ್ನು ಆಕೆಯ ಕಾಲುಗಳಿಗೆ ಇನ್ನು ಅಳವಡಿಸಿಯೇ ಇರಲಿಲ್ಲ. ಇದೇ ವೇಳೆ ಆಕೆಯ ಬಾಯ್​ಫ್ರೆಂಡ್​ “ಗೋ” ಎಂದು ಸಿಗ್ನಲ್​ ನೀಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡ ಯೆಸಿನಿಯಾ ಸೇತುವೆಯಿಂದ ಕೆಳಗೆ ಜಿಗಿದಿದ್ದಾಳೆ. ಕೆಳಗೆ ಬೀಳುವಾಗ ಶಾಕ್​ನಿಂದ ಗಾಳಿಯಲ್ಲೇ ಆಕೆಗೆ ತೀವ್ರ ಹೃದಯಾಘಾತವಾಗಿದೆ. ತುರ್ತುಸೇವೆ ಆಗಮಿಸುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99