ಮಾಮೂಲಿ ಕೊಡಲಿಲ್ಲ ಎಂದು ಅಮಾಯಕನ ಮೇಲೆ ಸುಳ್ಳು ಕೇಸ್ ದಾಖಲಿಸಿದ ಲೇಡಿ ಇನ್ಸ್ಪೆಕ್ಟರ್...!!ಮುಂದೇನಾಯ್ತು ನೀವೇ ನೋಡಿ...
Sunday, July 25, 2021
ಬೆಂಗಳೂರು: ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದ ಮಹಿಳಾ ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅಮಾನತುಗೊಳಿಸಿದ್ದಾರೆ.
ಆರ್ಎಂಸಿ ಯಾರ್ಡ್ ಪೊಲೀಸ್ ಇನ್ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಸಬ್ ಇನ್ಸ್ಪೆಕ್ಟರ್ ಅಂಜಿನಪ್ಪ ಹಾಗೂ ಇನ್ನೊಬ್ಬ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇನ್ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಎಸ್ಐ ಅಂಜಿನಪ್ಪ ಮತ್ತು ಇನ್ನೊಬ್ಬ ಪೊಲೀಸ್ ಬೀದಿಬದಿ ವ್ಯಾಪಾರಿ ಬಳಿ ಮಾಮೂಲಿ ಕೇಳಿದ್ದು, ಆತ ಕೊಡಲು ನಿರಾಕರಿಸಿದ್ದಕ್ಕೆ ಬಲವಂತವಾಗಿ ಗಾಂಜಾ ಬೆರೆಸಿದ ಸಿಗರೇಟ್ ಸೇದುವಂತೆ ಮಾಡಿ ಗಾಂಜಾ ಸೇವನೆ ಎಂದು ಕೇಸು ದಾಖಲಿಸಿದ್ದರು. ಬಳಿಕ ಇದರಿಂದ ನೊಂದ ಆತ ಆತ್ಮಹತ್ಯೆಗೆ ಯತ್ನಿಸಿದ್ದ.
ಈ ಕೇಸ್ ಸಂಬಂಧ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದ್ದು, ಆಂತರಿಕ ತನಿಖೆ ವೇಳೆ ಡಿಸಿಪಿ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಹೋಗಿ ಎಸ್ಐ ಅಂಜಿನಪ್ಪ ಸಿಕ್ಕಿಬಿದ್ದಿದ್ದ. ಈ ಮೂವರ ವಿರುದ್ಧ ನಡೆದ ಆಂತರಿಕ ತನಿಖೆಯಲ್ಲಿ ಆರೋಪ ದೃಢಪಟ್ಟು ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.