-->

ರೌಡಿಶೀಟರ್ ಪತ್ನಿಗೆ ಮೆಸೇಜ್ ಮಾಡಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ...

ರೌಡಿಶೀಟರ್ ಪತ್ನಿಗೆ ಮೆಸೇಜ್ ಮಾಡಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ...

ಬೆಂಗಳೂರು: ರೌಡಿಶೀಟರ್​ ಪತ್ನಿಗೆ ಮೆಸೇಜ್
ರೌಡಿಶೀಟರ್ ಪತ್ನಿಯೊಂದಿಗೆ ಮೆಸೇಜ್​​​​​ ಮಾಡುತ್ತಿದ್ದಕ್ಕೆ ಯುವಕನಿಗೆ ಮೂಗಲ್ಲಿ ಬಾಯಲ್ಲಿ ರಕ್ತ ಬರುವಂತೆ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರೌಡಿಶೀಟರ್​ಗಳಾದ ಮನೋಜ್​ ಗೂನ ಹಾಗೂ ಅಭಿ ಡಾಲ್​ ಎಂಬುವವರು ಮಂಡ್ಯ ಮೂಲದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಫೇಸ್​ಬುಕ್​ ಮೂಲಕ ಮನೋಜ್ ಪತ್ನಿ ಹಾಗೂ ಪುನೀತ್​ ಸ್ನೇಹಿತರಾಗಿದ್ದು, ಮೆಸ್ಸೇಂಜರ್​ ಮೂಲಕ ವಾಟ್ಸಾಪ್​ ನಂಬರ್ ಎಕ್ಸ್​ಚೇಂಜ್​ ಆಗಿದೆ. ನಂತರ ಫೋನ್​ನಲ್ಲಿ ಮಾತಾಡೋಕೆ ಶುರು ಮಾಡಿದ್ದಾರೆ. ಈ ವಿಷಯ ಮನೋಜ್​ಗೆ ಗೊತ್ತಾಗಿದೆ.
ಕೂಡಲೇ ಪುನೀತ್​ಗೆ ಕಾಲ್​ ಮಾಡಿದ ಮನೋಜ್ ಮಾತನಾಡಬೇಕೆಂದು ಕೆಂಗೇರಿಗೆ ಕರೆಸಿ, ಹಿಗ್ಗಾಮುಗ್ಗ ಥಳಿಸಿದ್ದಾನೆ. 

ಆದರೆ, ಪುನೀತ್​ ಈವರೆಗೆ ಮನೋಜ್​​ ಹಾಗೂ ಅಭಿ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99