ಡಿಫರೆಂಟ್ ಆಗಿ ಪ್ರಪೋಸ್ ಮಾಡಲು ಹೋಗಿ ಪ್ರಿಯತಮೆಗೆ ಗನ್ ಕೊಟ್ಟ ಲವ್ವರ್ ಬಾಯ್ ಈಗ ಪೊಲೀಸರ ಅತಿಥಿ..!
Saturday, July 10, 2021
ನಾಗಲ್ಯಾಂಡ್ : ತಾನು ಪ್ರೀತಿಸುವ ಹುಡುಗಿಗೆ ಡಿಫರೆಂಟ್ ಆಗಿ ಪ್ರಪೋಸ್ ಮಾಡಲು ಆಕೆಗೆ ಗನ್ ಕೊಟ್ಟರೆ ಹೇಗೆ ಎಂಬ ಯೋಚನೆ ಬಂದು ಆಕೆಯನ್ನು ಪ್ರಪೋಸ್ ಮಾಡಲು ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದ.
ಅಲ್ಲಿ ಚೆಕ್ ಮಾಡಿದಾಗ ಆತನ ಬಳಿ ಜೀವಂತ ಗುಂಡುಗಳು ಇರುವ ಗನ್ ಇರುವುದು ಕಂಡುಬಂದಿದೆ. ಕೂಡಲೇ ಹೋಟೆಲ್‌ನವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಠಾಣೆಗೆ ಎಳೆದೊಯ್ದಿದ್ದಾರೆ. ಯುವಕ ತಾನು ಪ್ರೇಯಸಿಗಾಗಿ ಇದನ್ನು ತಂದಿರುವುದಾಗಿ ಬೇಡಿಕೊಂಡರೂ ಪೊಲೀಸರು ಅದನ್ನು ಕೇಳಲಿಲ್ಲ. ಅತನಿಂದ 22 ಕ್ಯಾಲಿಬರ್ ಪಿಸ್ತೂಲ್ ಮತ್ತು 3 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿಮಾಪುರ್ ಪೊಲೀಸರು, ಯುವಕ ತನ್ನ ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ರೋಸ್ ಕೊಡುವ ಬದಲಿಗೆ ಗನ್ ನೀಡಿದ್ದಾನೆ. ಆದರೆ ಪ್ರಿಯತಮೆ ಅಷ್ಟೇನು ಇಂಪ್ರೆಸ್ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ. ನಂತರ ವಿಚಾರಣೆ ನಡೆಸಿ ಯುವಕನನ್ನು ಬಂಧಿಸಿ ನಂತರ ತಾತ್ಕಾಲಿಕ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಬಳಿಕ ರಿಂಗ್ ನೀಡಿ ಯುವತಿಯನ್ನು ಆತ ಪ್ರಪೋಸ್ ಮಾಡಿದ್ದು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.