ಅಪ್ರಾಪ್ತ ವಯಸ್ಸಿನ ಬಾಲಕಿಗೆ 30 ವರ್ಷದ ಯುವಕನ ಜೊತೆ ಮದುವೆ ಮಾಡಿಸಿದವರು ಜೈಲಿಗೆ...
Saturday, July 10, 2021
ಕೊಡಗು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಕೆಗಿಂತ ದುಪ್ಪಟ್ಟು ವಯಸ್ಸಿನ ವರನೊಂದಿಗೆ ಮದುವೆ ಮಾಡಿಸಿಕೊಡಲಾಗಿದೆ.
ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು 30 ವರ್ಷದ ಯುವಕನ ಜೊತೆ ಪಾಲಕರು ಮದುವೆ ಮಾಡಿಸಿದ್ದಾರೆ.ಕುಶಾಲನಗರದ ಬೈಚನಹಳ್ಳಿಯ ಮಾರಮ್ಮ ದೇವಸ್ಥಾನದಲ್ಲಿ ಈ ವಿವಾಹ ನೆರವೇರಿದ್ದು, ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರ, ವರನ ತಂದೆ-ತಾಯಿ, ಬಾಲಕಿಯ ತಾಯಿಯನ್ನು ಬಂಧಿಸಲಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.