-->

ಹೊರಗಿನಿಂದ ನೋಡಿದರೆ ಬ್ಯೂಟಿ ಪಾರ್ಲರ್ ಆದ್ರೆ ಒಳಗೆ ನಡೆಯುತ್ತಿದ್ದದ್ದೇ ಬೇರೆ...!!

ಹೊರಗಿನಿಂದ ನೋಡಿದರೆ ಬ್ಯೂಟಿ ಪಾರ್ಲರ್ ಆದ್ರೆ ಒಳಗೆ ನಡೆಯುತ್ತಿದ್ದದ್ದೇ ಬೇರೆ...!!

ವಿಜಯವಾಡ: ಬ್ಯೂಟಿ ಪಾರ್ಲರ್​ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಗ್ಯಾಂಗ್​ ಅನ್ನು ಪೂರ್ವ ಗೋದಾವರಿಯ ಕಾಕಿನಾಡ ಪೊಲೀಸರು ಬಂಧಿಸಿದ್ದಾರೆ.

 ಎರಡು ತಿಂಗಳಿಂದ ಸಿದ್ಧಾರ್ಥ ನಗರ ಕೇಂದ್ರದಲ್ಲಿ ಬಾಡಿಗೆ ಮನೆಯಲ್ಲಿ ಸುಧಾರಾಣಿ ಎಂಬಾಕೆ ಮೇಘನಾ ಫ್ಯಾಮಿಲಿ ಬ್ಯೂಟಿ ಸಲೂನ್​ ಹೆಸರಿನಲ್ಲಿ ಪಾರ್ಲರ್​ ನಡೆಸುತ್ತಿದ್ದಳು. ಇಬ್ಬರು ಮಹಿಳೆಯರನ್ನು ಕೆಲಸ ಮಾಡಲು ನೇಮಿಸಿಕೊಳ್ಳಲಾಗಿತ್ತು. ಪಾರ್ಲರ್​ ನಡೆಸುತ್ತಾ ಸುಧಾರಾಣಿ ರಾತ್ರಿ ಉದ್ಯಮಕ್ಕೆ ಎಂಟ್ರಿಕೊಟ್ಟಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಸೆಳೆದು ಇಬ್ಬರು ಮಹಿಳೆಯರೊಂದಿಗೆ ವೇಶ್ಯಾವಾಟಿಕೆಯಲ್ಲಿ ಸುಧಾರಾಣಿ ತೊಡಗಿದ್ದಳು.

 ಈ ಬಗ್ಗೆ ಸ್ಥಳೀಯ ಜನರಿಗೆ ಅನುಮಾನ ಮೂಡಿತ್ತು. ಅಲ್ಲದೆ, ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಗುರುವಾರ ದಾಳಿ ಮಾಡಿದ ಪೊಲೀಸರು ಸುಧಾರಾಣಿಯ ಜತೆಯಲ್ಲಿ ವೇಶ್ಯಾವಾಟಿಕೆ ಆಯೋಜಿಸುತ್ತಿದ್ದವರನ್ನು ಬಂಧಿಸಿದ್ದಾರೆ. ಇದೇ ವೇಳೆ ಮೂವರು ವಿಧವೆಯರು ಮತ್ತು ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99