ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ ಮಹಿಳೆ - ಮುಂದಾಗಿದ್ದು ಏನು ಗೊತ್ತಾ..??
Saturday, July 3, 2021
ಚಿಕ್ಕಬಳ್ಳಾಪುರ: 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಪರಿಚಿತ ಮಹಿಳೆಯೊಬ್ಬಳು ವೇಶ್ಯಾವಾಟಿಕೆಗೆ ದೂಡಿದ್ದು, ಇದೀಗ ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ಬಾಲಕಿ ದಲಿತ ಸಮುದಾಯಕ್ಕೆ ಸೇರಿದ್ದು, ಈಕೆಯ ತಂದೆ-ತಾಯಿ ಕುಡಿತ ಚಟ ಅಂಟಿಸಿಕೊಂಡಿದ್ದರು. ಈ ಗ್ರಾಮಕ್ಕೆ ಸಂಬಂಧಿಕರ ಮನೆಗೆಂದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗೌರಿ ಎಂಬಾಕೆ ಬರುತ್ತಿದ್ದಳು. ಬಾಲಕಿಯ ಪಾಲಕರು ಕುಡಿದ ಅಮಲಿನಲ್ಲಿ ಕಿತ್ತಾಡುವುದನ್ನೇ ಬಂಡವಾಳ ಮಾಡಿಕೊಂಡ ಗೌರಿ, ಬೇರೆಯವರೊಂದಿಗೆ ಮಲಗಿದರೆ ಹಣ ಸಿಗುತ್ತೆ ಎಂದು ಬಾಲಕಿಯ ತಲೆಕೆಡಿಸಿದ ಗೌರಿ, ಪುರುಷರೊಂದಿಗೆ ಬಿಟ್ಟಿದ್ದಾಳೆ. ಹೀಗೆ ಐದಾರು ತಿಂಗಳಿಂದ ನಿರಂತರವಾಗಿ ಗ್ರಾಮದ ಆರೇಳು ಮಂದಿ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಮಗಳನ್ನು ವೇಶ್ಯಾವಾಟಿಕೆಗೆ ದೂಡಿರುವುದು ಹೆತ್ತವರಿಗೆ ಗೊತ್ತಿದ್ದರೂ ಹಣಕ್ಕಾಗಿ ಸುಮ್ಮನಿದ್ದರಂತೆ. ಇತ್ತೀಚಿಗೆ ಬಾಲಕಿಯ ತಾಯಿಗೆ ಕರೊನಾ ಬಂದಿದ್ದ ಕಾರಣ ಮುದುಗೆರೆ ಗ್ರಾಮದ ಸಂಬಂಧಿಕರೊಬ್ಬರ ಮನೆಗೆ ಬಾಲಕಿಯನ್ನು ಪಾಲಕರು ಕಳುಹಿಸಿದ್ದರು. ಅಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದ ಬಾಲಕಿಯನ್ನ ಆಶಾ ಕಾರ್ಯಕರ್ತೆಯರು ಪರಿಶೀಲಿಸಿದ್ದು, ಆ ವೇಳೆ ಬಾಲಕಿ ವೇಶ್ಯಾವಾಟಿಕೆ ದಂಧೆ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಈ ಸುದ್ದಿಯನ್ನ ಆಶಾ ಕಾರ್ಯಕರ್ತೆಯು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ತಿಳಿಸುತ್ತಿದ್ದಂತೆ ಗುರುವಾರ ಸಂಜೆ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಆಕೆ 5 ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.